ಬೆಂಗಳೂರು,ಜುಲೈ,28,2023(www.justkannada.in): ಪ್ರೋಟೋಕಾಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಫ್ಲೈಟ್ ಮಿಸ್ ಮಾಡಿಕೊಂಡ ಘಟನೆ ನಡೆದಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಒಂದು ನಿಮಿಷ ತಡವಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಕ್ಕೆ ಫ್ಲೈಟ್ ಮಿಸಿ ಮಿಸ್ ಆಗಿದೆ. ಥಾವರ್ ಚಂದ್ ಗೆಹ್ಲೋಟ್ ಅವರು ನಿನ್ನೆ ಮಧ್ಯಾಹ್ನ ಹೈದರಾಬಾದ್ಗೆ ತೆರಳಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು, ಆದರೆ, ಇನ್ನೂ ಏರ್ ಏಷ್ಯಾ ವಿಮಾನ ಹೊರಡಲು ಸಮಯ ಇದೆ ಎಂದು ಸಿಬ್ಬಂದಿ ರಾಜ್ಯಪಾರನ್ನು ಕರೆದುಕೊಂಡು ಹೋಗಿ ವಿಐಪಿ ಲಾಂಜ್ನಲ್ಲಿ ಕೂರಿಸಿದ್ದು, ಟೈಮ್ ಆಗಿರುವುದು ಅವರ ಗಮನಕ್ಕೆ ಬಂದಿಲ್ಲ. ಇದರಿಂದ ವಿಮಾನ ಸರಿಯಾದ ಸಮಯಕ್ಕೆ ಟೇಕಫ್ ಆಗಿ ಹೋಗಿದೆ.
ಬಳಿಕ ಫ್ಲೈಟ್ ಸಮಯವಾಗಿರುವುದು ಗಮನಕ್ಕೆ ಬಂದ ಕೂಡಲೇ ರಾಜ್ಯಪಾಲರು ವಿಮಾನ ಹತ್ತಲು ಹೋಗಿದ್ದಾರೆ. ಆದರೆ, ಅಷ್ಟರಲ್ಲಾಗಲೇ ವಿಮಾನ ಹೋಗಿತ್ತು. ಪ್ರೋಟೋಕಾಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿಮಾನ ತಪ್ಪಿದೆ. ಬಳಿಕ ಅಧಿಕಾರಿಗಳು ಮತ್ತೊಂದು ವಿಮಾನದ ಮೂಲಕ ಅವರನ್ನು ಹೈದರಾಬಾದ್ಗೆ ಕಳುಹಿಸಿಕೊಟ್ಟಿದ್ದಾರೆ.
ಏರ್ಪೋರ್ಟ್ ನಲ್ಲಿ ರಾಜ್ಯಪಾಲರಿಗೆ ವಿಮಾನ ಮಿಸ್ ಆದ ಹಿನ್ನೆಲೆಯಲ್ಲಿ ಶಿಷ್ಟಾಚಾರ ಅಧಿಕಾರಿಗಳು ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಏರ್ ಏಷ್ಯಾ ಏರ್ಲೈನ್ಸ್ ದೂರು ನೀಡಿದ್ದಾರೆ. ವಿಮಾನ ಮಿಸ್ ಆಗಲು ಕಾರಣ ಜೊತೆಗೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Key words: Negligence –protocol-officers-Flight -misses – governor