ಹುಬ್ಬಳ್ಳಿ,ಏಪ್ರಿಲ್, 30, 2024 (www.justkannada.in): ಹುಬ್ಬಳ್ಳಿಯಲ್ಲಿ ಕಾಲೇಜು ಆವರಣದಲ್ಲಿ ನಡೆದಿದ್ದ ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಫಯಾಜ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಹುಬ್ಬಳ್ಳಿ 1ನೇ ಜೆಎಂಎಫ್ ಸಿ ಕೋರ್ಟ್ ಆದೇಶಿಸಿದೆ.
ಪ್ರಕರಣ ಸಂಬಂಧ ವಿಚಾರಣೆಗಾಗಿ ಸಿಐಡಿ ಆರೋಪಿ ಫಯಾಜ್ ನನ್ನ 6ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿತ್ತು. ಇಂದು ಕಸ್ಟಡಿ ಅಂತ್ಯವಾದ ಹಿನ್ನೆಲೆ ಆರೋಪಿ ಫಯಾಜ್ ನನ್ನು ಹುಬ್ಬಳ್ಳಿ 1ನೇ ಜೆಎಂಎಫ್ ಸಿ ಕೋರ್ಟ್ ಗೆ ಹಾಜರುಪಡಿಸಿತ್ತು.
ಆರೋಪಿ ಫಯಾಜ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಿಸಿದೆ. ಇದೀಗ ಫಯಾಜ್ ನನ್ನು’ ಧಾರವಾಡ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ.
ಏಪ್ರಿಲ್ 18 ರಂದು ಕಾಲೇಜು ಆವರಣದಲ್ಲಿ ನೇಹಳನ್ನ ಫಯಾಜ್ ಚಾಕುವಿನಿಂದ ಇರಿದು ಹತ್ಯೆಗೈದಿದ್ದ. ಬಳಿಕ ಪೊಲೀಸರು ಆತನನ್ನ ಬಂಧಿಸಿದ್ದರು. ಪ್ರಕರಣ ಕುರಿತು ಸಿಐಡಿ ತನಿಖೆ ನಡೆಯುತ್ತಿದೆ.
Key words: Neha murder case, Fayaz, judicial custody