ಎನ್ ಇಪಿಯಲ್ಲಿ ಪಠ್ಯೇತರ ಚಟುವಟಿಕೆ ಕಡ್ಡಾಯ- ಸಚಿವ ಅಶ್ವತ್ ನಾರಾಯಣ್

ಬೆಂಗಳೂರು,ನವೆಂಬರ್,13,2021(www.justkannada.in):  ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಾಂಸ್ಕೃತಿಕ, ದೈಹಿಕ ಶಿಕ್ಷಣ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಒತ್ತು ಕೊಡಲಾಗಿದ್ದು, ಇವೆಲ್ಲವನ್ನೂ ಕಡ್ಡಾಯಗೊಳಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ್ ಹೇಳಿದ್ದಾರೆ.

ಮಲ್ಲೇಶ್ವರಂ 18ನೇ ಅಡ್ಡರಸ್ತೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಅಶ್ವಥ್ ನಾರಾಯಣ್, ಕನ್ನಡ ರಾಜ್ಯೋತ್ಸವ ಮತ್ತು 2021-22ನೇ ಸಾಲಿನ ಪಠ್ಯೇತರ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದರು.

ಎನ್ಇಪಿಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ವಿಕಸನದ ಗುರಿ ಇಟ್ಟುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ಸರಕಾರಿ ಕಾಲೇಜುಗಳ ಸಂಪೂರ್ಣ ಡಿಜಿಟಲೀಕರಣವನ್ನು ಮಾಡಿದ್ದು, ಈ ವಿಚಾರದಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಬೋಧನಾ ವ್ಯವಸ್ಥೆಯ ಡಿಜಿಟಲೀಕರಣದಿಂದ ಶಿಕ್ಷಣದ ಗುಣಮಟ್ಟ ಸಾಕಷ್ಟು ಸುಧಾರಿಸಲಿದೆ ಎಂದು ಅಶ್ವಥ್ ನಾರಾಯಣ್ ನುಡಿದರು.

ಸರಕಾರಿ ಕಾಲೇಜುಗಳಲ್ಲಿ ಇರುವಂತಹ ಆಧುನಿಕ ವ್ಯವಸ್ಥೆಗಳು ರಾಜ್ಯದ ಖಾಸಗಿ ವಿ.ವಿಗಳಲ್ಲೂ ಇಲ್ಲ. ಇವತ್ತು ಇಡೀ ಭಾರತವೇ ಬೆಂಗಳೂರಿನತ್ತ ನೋಡುತ್ತಿದ್ದು, ತಂತ್ರಜ್ಞಾನ ಮತ್ತು ಆವಿಷ್ಕಾರ ಕ್ಷೇತ್ರಗಳಲ್ಲಿ ರಾಜ್ಯದ ರಾಜಧಾನಿಯು 23ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಭಾರತದ ಬೇರೆ ಯಾವ ನಗರಗಳೂ ಇಲ್ಲ ಎಂದು ಅವರು ಉಲ್ಲೇಖಿಸಿದರು.

ಬೆಂಗಳೂರು ಇವತ್ತು ಸುವರ್ಣಾವಕಾಶಗಳ ನಗರವಾಗಿದೆ. ವಿದ್ಯಾರ್ಥಿಗಳು ಕೇವಲ ಅದೃಷ್ಟವನ್ನು ನಂಬಿ ಕೂರದೆ, ಶ್ರಮ ವಹಿಸಿ ಸಾಧನೆ ಮಾಡಿ, ಇರುವ ಅವಕಾಶಗಳನ್ನು ತಮ್ಮದನ್ನಾಗಿಸಿಕೊಳ್ಳಬೇಕು ಎಂದು ಸಚಿವ ಅಶ್ವಥ್ ನಾರಾಯಣ್ ಹಿತವಚನ ಹೇಳಿದರು.

ಕನ್ನಡಿಗರು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಬಾರದು. ಜಗತ್ತಿನ ಮೂಲೆಮೂಲೆಗಳಲ್ಲೂ ಇಂದು ಕನ್ನಡಿಗ ಸಾಧಕರಿದ್ದಾರೆ. ವಿದ್ಯಾರ್ಥಿ ಸಮುದಾಯವು ಇಂಥವರಿಂದ ಪ್ರೇರಣೆ ಪಡೆದುಕೊಳ್ಳಬೇಕು. ನಮ್ಮ ನಾಡು-ನುಡಿ ಚೆನ್ನಾಗಿರಬೇಕೆಂದರೆ ಕನ್ನಡಿಗರು ಸದೃಢವಾಗಿ ಬೆಳೆಯಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ನಿರೂಪಕಿ ಅಪರ್ಣಾ, ಪ್ರಾಂಶುಪಾಲರಾದ ಡಾ.ಡಿ.ಎಸ್. ಪ್ರತಿಭಾ, ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರತ್ನಾಕರ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಎಸ್.ಕೌಸಲ್ಯಾ ಮುಂತಾದವರು ಉಪಸ್ಥಿತರಿದ್ದರು.

Key words: NEP -empowers -teaching-learning- process- minister-Dr.C.N.Ashwatha Narayan

ENGLISH SUMMARY…

NEP empowers teaching-learning process: Dr.C.N.Ashwatha Narayana

Bengaluru: Aspiring to create a well-rounded personality among students National Education Policy (NEP-2020) brings everything- cultural, curricular, extracurricular, skill, vocational- into a single fold, Dr.C.N.Aswhatha Narayana, stated on Saturday.

Participating in Kannada Rajyotsava and launching extracurricular activities for the year 2021-22 at government first-grade college in Malleshwarm 18th cross, he told, NEP will empower students and faculty by facilitating blended mode of the teaching-learning process.

“The government is focusing on introducing digital technology to education and is a front runner in making it a reality in the entire country. Digitalization of the teaching-learning process will enable to better the quality of education,” Narayana told.

Government institutions are being upgraded with modern facilities. The whole of the nation is looking up to Bengaluru and the city ranks 23rd with regard to technology and innovations which no other city of the country enjoys, he explained.

Saying that Kannadigas should not limit themselves to Karnataka alone, he added, the student community should explore opportunities all over the world and bring pride to the state as well as to the nation.

Anchor Aparna, Dr.D.S.Pratibha, Principal, Ratnakara Shetty, Principal of government pre-university college, S.Kousalya, Convenor, Cultural Committee of the college, and others were present.