ಮೈಸೂರು,ಸೆಪ್ಟಂಬರ್,3,2022(www.justkannada.in): ಪ್ರಾದೇಶಿಕ ಭಾಷೆಗಳಿಗೆ ಧಕ್ಕೆಯಾಗದಂತೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಚಿಂತನೆ ನಡೆಯುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಬಿ.ಸಿ ನಾಗೇಶ್, ಮೊದಲು 3 ರಿಂದ 8 ವರ್ಷದ ಮಕ್ಕಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ ನಂತರ ಹಂತ ಹಂತವಾಗಿ ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡಲಾಗುವುದು. ನೂತನ ಶಿಕ್ಷಣ ಪದ್ಧತಿಯಲ್ಲಿ ಗುರುಕುಲ ಹಾಗೂ ಭಾರತೀಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದೆ.
ಗುಣಮಟ್ಟದ ಶಿಕ್ಷಣದ ಜತೆ ನೈತಿಕತೆಯು ಇದರಲ್ಲಿ ಅಡಕವಾಗಿರುತ್ತದೆ. ಮಕ್ಕಳ ಹಕ್ಕುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. RTI ಪಾಲಿಸಿಯನ್ನು ಎಂಟರಿಂದ ಹನ್ನೆರಡನೇ ತರಗತಿಯ ವರೆಗೂ ವಿಸ್ತರಿಸಲು ಚಿಂತನೆ ಮಾಡಲಾಗುತ್ತಿದೆ ಎಂದು ಬಿ.ಸಿ ನಾಗೇಶ್ ತಿಳಿಸಿದರು.
key words: NEP -implement – regional –languages-Minister -BC Nagesh.