ಬೆಳಗಾವಿ,ಜನವರಿ,9,2021(www.justkannada.in): ತಮ್ಮ ಖಾಸಗಿ ಕಾರಿಗೆ ಡಿಪೋದಲ್ಲಿ ಡಿಸೇಲ್ ಹಾಕಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಲಕ್ಷ್ಮಣ್ ಸವದಿ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಲಕ್ಷ್ಮಣ್ ಸವದಿ, ಡಿಸೇಲ್ ಹಾಕಿಸದಷ್ಟು ದುರ್ಗತಿ ನನಗೆ ಬಂದಿಲ್ಲ. 3 ಸಾವಿರಕ್ಕೆ ಜಿಪುಣತನ ಮಾಡುವ ವ್ಯಕ್ತಿ ನಾನಲ್ಲ ಎಂದು ಹೇಳಿದ್ದಾರೆ. ನಾನು ಸಾರಿಗೆಯ ಪುರುಷರ ಮತ್ತು ಮಹಿಳೆಯ ವಿಶ್ರಾಂತಿ ಗೃಹಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ನಾನು ಕಾರ್ಯಕ್ರಮದಲ್ಲಿದ್ದ ವೇಳೆ ಈ ಘಟನೆ ನಡೆದಿದೆ. ನನ್ನ ಕಾರು ಚಾಲಕ ಡಿಪೋದ ಒಳಗೆ ಹೋಗಿ ನಮ್ಮ ಕಾರಿಗೆ ಡಿಸೇಲ್ ಹಾಕಿಸ್ಬೇಕು. ಬಂಕ್ ಎಲ್ಲಿದೆ ಎಂದು ಕೇಳಿದ್ದಾನೆ. ಆಗ, ಬಂಕ್ ಮ್ಯಾನೇಜರ್ ಇಲ್ಲೇ ಹಾಕಿಸಿಕೊಳ್ಳುವಂತೆ ಹೇಳಿದ್ದಾನೆ. ಆಗ ಡ್ರೈವರ್ ತನಗೆ ಅರಿವಿಲ್ಲದೇ ಡಿಸೇಲ್ ಹಾಕಿಸಿಕೊಂಡಿದ್ದಾನೆ ಸ್ಪಷ್ಟನೆ ನೀಡಿದ್ದಾರೆ.
ನನಗೆ ತಿಳಿಯದೇ ಈ ಘಟನೆ ನಡೆದಿದೆ. 3 ಸಾವಿರಕ್ಕೆ ಜಿಪುಣತನ ಮಾಡುವ ದುರ್ಗತಿ ನನಗೆ ಬಂದಿಲ್ಲ. ಯಾರೋ ಆಗದವರು ಸುದ್ದಿಯನ್ನ ಹಬ್ಬಿಸುತ್ತಿದ್ದಾರೆ. ನನಗೆ ಡಿಸೇಲ್ ಹಾಕಿಸಲಾರದಷ್ಟು ದುರ್ಗತಿ ಬಂದಿಲ್ಲ ಎಂದರು.
Key words: never – Diesel -private car- DCM -Laxman Savadi.