ಮೈಸೂರು,ಡಿಸೆಂಬರ್,9,2020(www.justkannada.in): ಭೂ ಸುಧಾರಣಾ ಕಾಯ್ದೆಗೆ ಜೆಡಿಎಸ್ ಬೆಂಬಲ ನೀಡಿದ ಹಿನ್ನೆಲೆ, ಮಣ್ಣಿನಮಗ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನ ಮಾಜಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಟ್ವಿಟ್ಟರ್ ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ, ಇದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಸ್ವತಃ ತಲೆ ತಗ್ಗಿಸುವ ಸಂಗತಿ. “ರಾಜಕೀಯ ಪ್ರಕ್ರಿಯೆಗಳ ಆಚೆಗೆ ಸಾಮಾಜಿಕ ಬದ್ಧತೆ ಇಲ್ಲದಿದ್ದರೆ ಮಣ್ಣಿನ ಮಗನಾದರೂ ಅಷ್ಟೇ ಯಾರಾದರೂ ಅಷ್ಟೇ ತಲೆ ತಗ್ಗಿಸುವಂತೆ” ಎಂದು ಟ್ವೀಟ್ ಮಾಡಿ ಹೆಚ್.ಡಿ ದೇವೇಗೌಡರ ಕಾಲೆಳೆದಿದ್ದಾರೆ.
ಹೋರಾಟದ ಹಿನ್ನೆಲೆಯಿಂದ ಬಂದು ಸದನದ ಹೊರಗೆ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಸದನದ ಒಳಗೆ ಕಾಯ್ದೆಯನ್ನು ಬೆಂಬಲಿಸುವ ಹೆಚ್ ಡಿ ದೇವೇಗೌಡರ ಈ ಕೆಲಸ ಸ್ವತಃ ಅವರೇ ತಲೆ ತಗ್ಗಿಸುವ ಸಂಗತಿ. ಇವರನ್ನು ಕಾಲ ಎಂದಿಗೂ ಕ್ಷಮಿಸೋದಿಲ್ಲ ಎಂದು ಮಾಜಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ತರಾಟೆಗೆ ತೆಗೆದುಕೊಂಡರು.
ರಾಜ್ಯ ಸರ್ಕಾರದ ಭೂಸುಧಾರಣಾ ತಿದ್ಧುಪಡಿ ಕಾಯ್ದೆ ನಿನ್ನೆ ವಿಧಾನಪರಿಷತ್ ನಲ್ಲಿ ಅಂಗೀಕಾರವಾಯಿತು. ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗೆ ಜೆಡಿಎಸ್ ಬೆಂಬಲಿಸಿದ್ದು, ಜೆಡಿಎಸ್ ಪಕ್ಷದ ಈ ನಡೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ.
English summary…
‘Time will never forgive you’ – former minister Dr. H.C. Mahadevappa accuses HDD
Mysuru, Dec. 9, 2020 (www.justkannada.in): Former Minister Dr. H.C. Mahadevappa has slammed former Prime Minister H.D. Devegowda on the support given by JDS to the Land Reforms Act.
In his tweet, he wrote that “if a person doesn’t have a social commitment beyond political processes, either he is a son of soil or anyone, he should bend his head in shame.’ It is indeed unfortunate that while he opposed the amendment of the act outside the parliament, whereas he has extended his support inside, he stated.
The State Government passed the Land Reforms Bill yesterday in the upper house, and JDS has supported it. It has led to a huge discussion about the JDS move in social media.
Keyword: amendment/ land reform bill/ H.D. Devegowda/ Dr. H.C. Mahadevappa
Key words: never sorry-Former Minister- Dr HC Mahadevappa-took over –former PM-HD Deve Gowda