ಬೆಂಗಳೂರು,ಡಿಸೆಂಬರ್,29,2020(www.justkannada.in): ಬ್ರಿಟನ್ ನಲ್ಲಿ ಪತ್ತೆಯಾಗಿರುವ ಹೊಸ ಕೊರೋನಾ ರೂಪಾಂತರ ಭಾರತಕ್ಕೆ ಕಾಲಿಟ್ಟಿದೆ. ಅಲ್ಲದೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಹೊಸ ಕೊರೋನಾ ಪ್ರಭೇದ ಪತ್ತೆಯಾಗಿದೆ.
ಬೆಂಗಳೂರಿನ ಮೂವರಿಗೆ ರೂಪಾಂತರಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ಪ್ರಕಟಣೆ ಹೊರಡಿಸಿದೆ. ಬ್ರಿಟನ್ ನಿಂದ ಭಾರತಕ್ಕೆ ಬಂದ 6 ಮಂದಿಯಲ್ಲಿ ರೂಪಾಂತರಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಈ ಪೈಕಿ ಹೈದರಾಬಾದ್ ನ ಇಬ್ಬರು, ಪುಣೆಯ ಒಬ್ಬರು ಹಾಗೂ ಬೆಂಗಳೂರಿನ ಮೂವರಿಗೆ ರೂಪಾಂತರಿ ಕೊರೊನಾ ಸೋಂಕು ಪತ್ತೆಯಾಗಿದೆ.
ನ.25 ರಿಂದ ಡಿ.23 ವರೆಗೆ 33,000 ಪ್ರಯಾಣಿಕರು ಭಾರತದ ವಿವಿಧ ಏರ್ ಪೋರ್ಟ್ ಗಳಿಗೆ ಬ್ರಿಟನ್ ನಿಂದ ಅಗಮಿಸಿದ್ದರು. ಈ ಎಲ್ಲಾ ಪ್ರಯಾಣಿಕರನ್ನು ಆಯಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಆರ್ ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸುತ್ತಿವೆ. 114 ಮಂದಿಯಲ್ಲಿ ಸಾಮಾನ್ಯ ಕೊರೋನಾ ಪ್ರಕರಣ ಪತ್ತೆಯಾಗಿದೆ.
New Coronavirus strain found in 6 persons in country, including 3 in Bengaluru
Bengaluru, Dec. 29, 2020 (www.justkannada.in): The Britain based new Coronavirus strain has come to India. New Coronavirus strain is in six persons, including one in Hyderabad, two in Pune, and three in Bengaluru.
A total number of 33,000 passengers had arrived in India between November 25 and December 23 from Britain. All the states where these passengers belong to are conducting RT-PCR tests. 114 of them have tested positive for the common Corona virus.
Keywords: New Coronavirus strain/ 3 in Bengaluru
Key words: New corona- detected – india- three- Bengaluru