ನವದೆಹಲಿ,ಡಿ,30,2019(www.justkannada.in): ಚಳಿಗಾಳಿ ಹಾಗೂ ದಟ್ಟ ಮಂಜಿನಿಂದ ನವದೆಹಲಿ ತತ್ತರಿಸಿದ್ದು ಇಂದು ಬೆಳಗ್ಗೆ ದಟ್ಟ ಮಂಜು ಕವಿದು ಮಂದ ಬೆಳಕು ಹಿನ್ನೆಲೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ರೈಲು ಹಾಗೂ ವಿಮಾನ ಸೇವೆಗೂ ಅಡ್ಡಿಯುಂಟಾಗಿದೆ.
ಮಂಜು ಕವಿದು ಮಂದ ಬೆಳಕಿರುವ ಹಿನ್ನೆಲೆ ಉತ್ತರ ರೈಲ್ವೆಯ 30 ರೈಲುಗಳ ಸಂಚಾರ ವಿಳಂಬವಾಗಿದೆ. ಹಾಗೆಯೇ ಏರ್ ಪೋರ್ಟ್ ನ ರನ್ ವೇ ಕಾಣಿಸದ ಹಿನ್ನೆಲ ದೆಹಲಿಯ ಮೂರು ವಿಮಾನಗಳ ಮಾರ್ಗವನ್ನ ಬದಲು ಮಾಡಲಾಗಿದೆ. ದಟ್ಟ ಮಂಜಿನಿಂದಾಗಿ ಮುಖ್ಯರಸ್ತೆಗಳಲ್ಲೇ ದೃಶ್ಯತೆ ತೀರಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ವಾಹನಗಳ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿತ್ತು.
ದೆಹಲಿಯಲ್ಲಿ ಕನಿಷ್ಠ ತಾಪಮಾನ ಮುಂದುವರೆದಿದ್ದು 2.5 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ದಾಖಲಾಗಿದೆ. ಏರ್ ಕ್ವಾಲಿಟಿ ಇಂಡೆಕ್ಸ್ 450ಕ್ಕೆ ತಲುಪಿದೆ. ದಟ್ಟ ಮಂಜು ಜತೆಗೆ ವಾಯು ಮಾಲಿನ್ಯಸ ಹೆಚ್ಚಾಗಿದೆ. ಇದರಿಂದಾಗಿ ದೆಹಲಿಯ ಜನತೆ ತತ್ತರಿಸಿದ್ದಾರೆ.
Key words: New Delhi- Fog-delay -30 trains