ಮೈಸೂರು,ಸೆ,10,2019(www.justkannada.in): ನಗರದ ವಾತಾವರಣಕ್ಕೆ ಹೊಂದಿಕೊಳ್ಳದ ಹಿನ್ನೆಲೆ ದಸರಾ ಗಜಪಡೆಯ ಮೊದಲ ತಂಡದ ಸದಸ್ಯ ಹೊಸ ಆನೆ ಈಶ್ವರನನ್ನ ಮತ್ತೆ ವಾಪಸ್ ಕಾಡಿಗೆ ಕಳುಹಿಸಲು ನಿರ್ಧರಿಸಲಾಗಿದೆ.
ತಾಲೀಮು ನಡೆಸುತ್ತಿದ್ದ ವೇಳೆ ಎರಡು ಮೂರು ಬಾರಿ ಈಶ್ವರ ಆನೆ ವಿಚಲಿತನಾಗಿದ್ದನು. ಹಾಗೆಯೇ ನಗರದ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರಲಿಲ್ಲ. ಈ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಆತಂಕ ವ್ಯಕ್ತಪಡಿಸಿದ ಹಿನ್ನಲೆ ಈಶ್ವರನನ್ನ ವಾಪಸ್ ಕಾಡಿಗೆ ಕಳುಹಿಸಲು ಅರಣ್ಯಾಧಿಕಾರಿಗಳು ತೀರ್ಮಾನ ಮಾಡಿದ್ದಾರೆ.
ಜತೆಗೆ ಪರ್ಯಾಯವಾಗಿ ಬೇರೆ ಆನೆ ತರಲು ಅರಣ್ಯಾಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಸಾರ್ವಜನಿಕರಿಂದ ದೂರು ಬರುತ್ತಿರುವ ಹಿನ್ನಲೆ ಇಂದಿನ ಸಭೆಯಲ್ಲಿ ಈಶ್ವರ ಬಗ್ಗೆ ಸಚಿವ ಸೋಮಣ್ಣ ಆತಂಕ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಫ್ ಅಲೆಕ್ಸಾಂಡರ್, ಇಂತಹ ದೂರುಗಳು ಬಂದಾಗ ಬದಲಾಯಸಲೇ ಬೇಕಾಗುತ್ತೆ. ಭಧ್ರತೆ ದೃಷ್ಟಿಯಿಂದ ಈ ನಿರ್ಧಾರ ಅನಿವಾರ್ಯವಾಗಿದೆ. ಸಾಹಸ ಪಟ್ಟು ಆನೆಗಳನ್ನ ಸಜ್ಜುಗೊಳಿಸುತ್ತಿದ್ದೆವು. ಇಂತಹ ದೂರುಗಳು ಬಂದಾಗ ಸಹಜವಾಗಿ ಹಿಂದೆ ಸರಿಯಬೇಕಿರುತ್ತದೆ. ಹೀಗೆ ಮುಂದುವರೆದರೆ ಮುಂದಿನ ಪೀಳಿಗೆಗೆ ಆನೆಗಳನ್ನ ತರೋದೇ ಕಷ್ಟ ಎಂದು ಬೇಸರ ವ್ಯಕ್ತಪಡಿಸಿದರು.
Key words: new elephant- Ishwar – out -Mysore Dasara-send back – forest