ಬೆಂಗಳೂರು, ಜೂನ್ 29, 2019(www.justkannada.in): ಗೂಗಲ್ ಮ್ಯಾಪ್ ಮತ್ತೊಂದು ಹೊಚ್ಚ ಹೊಸ ವೈಶಿಷ್ಟ್ಯ ಪರಿಚಯಿಸಿದೆ.
ಗೂಗಲ್ ಮ್ಯಾಪ್ನಲ್ಲಿ ‘ಸ್ಟೇ ಸೇಫ್’ ಫೀಚರ್ ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಲಭ್ಯವಾಗಿದ್ದು, ಚಾಲನೆ ಅಥವಾ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವಾಗ ಆಫ್-ರೂಟ್ನಲ್ಲಿ ಹೋಗುತ್ತಿದ್ದರೆ ಎಚ್ಚರಿಸಲು ಕೆಲಸ ಮಾಡಲಿದೆ.
ಗೂಗಲ್ ಮ್ಯಾಪ್ ಬಳಕೆದಾರರು ಸ್ವಯಂ ಚಾಲನೆ ಮಾಡುವಾಗ ಅಥವಾ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವಾಗ ತಮ್ಮ ಲೈವ್ ಸ್ಥಳವನ್ನು ತಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಈ ಫೀಚರ್ ಅನುಮತಿಸುತ್ತದೆ. ಇದರಿಂದ ಸುರಕ್ಷಿತವಾಗಿರುವುದು ಸೇರಿದಂತೆ ಆಫ್ ರೂಟ್ ಅಲರ್ಟ್ ಪಡೆಯಲು ಸಾಧ್ಯವಾಗುತ್ತದೆ ಎಂದು ಗೂಗಲ್ ಮ್ಯಾಪ್ಸ್ ತಿಳಿಸಿದೆ.
ಗೂಗಲ್ ಮ್ಯಾಪ್ನ ಮೆನು ಕ್ಲಿಕ್ ಮಾಡಿ ‘ಸುರಕ್ಷಿತವಾಗಿರಿ’ ಮತ್ತು ‘ಆಫ್-ರೂಟ್ ಅಲರ್ಟ್ ” ಆಯ್ಕೆಗಳನ್ನು ಕ್ಲಿಕ್ ಮಾಡಿ ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಬಹುದು. ಹೀಗೆ ಮಾಡಿದ ನಂತರ ಈ ಕೆಳಗೆ ತಿಳಿಸಿದಂತೆ ಗೂಗಲ್ ಮ್ಯಾಪ್ ಕೆಲಸ ಮಾಡಲಿದೆ.