ಬೆಂಗಳೂರು, ಸೆಪ್ಟೆಂಬರ್ 10, 2021 (www.justkannada.in): ತಮಿಳುನಾಡು, ಉತ್ತರಾಖಂಡ ಸೇರಿದಂತೆ ನಾಲ್ಕು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಕವಾಗಿದೆ.
ಈ ಸಂಬಂಧ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆದೇಶ ಹೊರಡಿಸಿದ್ದಾರೆ. ಈ ಮೂಲಕ ತಮಿಳುನಾಡು, ಉತ್ತರಾಖಂಡ್, ಪಂಜಾಬ್ ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಕವಾಗಿದೆ.
ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಪಂಜಾಬ್ ರಾಜ್ಯದ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ.
ಅಸ್ಸಾಂನ ರಾಜ್ಯಪಾಲ ಪ್ರೊ. ಜಗದೀಶ್ ಮುಖಿ ನಾಗಾಲ್ಯಾಂಡ್‌ನ ಉಸ್ತುವಾರಿ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ನಾಗಲ್ಯಾಂಡ್ ರಾಜ್ಯದ ಮಾಜಿ ರಾಜ್ಯಪಾಲ ಆರ್. ಎನ್. ರವಿ ತಮಿಳುನಾಡಿನ ನೂತನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಗುರ್ ಮೀತ್ ಸಿಂಗ್ ಉತ್ತರಾಖಂಡ್ ನೂತನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
ಬೇಬಿ ರಾಣಿ ಮೌರ್ಯ ಅವರು ಉತ್ತರಾಖಂಡ ರಾಜ್ಯಪಾಲೆ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಗುರ್ಮಿತ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ ಅವರು ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು.
key words: New Governor appointed for Tamil Nadu, Uttarakhand, Nagaland and Punjab