ಮೈಸೂರು,ಏಪ್ರಿಲ್ ,1,2021(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪೊಲೀಸರ ಕರ್ತವ್ಯವನ್ನು ಜನಸ್ನೇಹಿಯಾಗಿಸಲು ಇಂದಿನಿಂದ ನೂತನ ಸುಧಾರಿತ ಸಂಚಾರ ನಿಯಂತ್ರಣಾ ಸೂಚಿ ಜಾರಿ ಮಾಡಲಾಗುತ್ತಿದೆ.
ಸಾರ್ವಜನಿಕರಿಗೆ ಸ್ಪಂದಿಸುವುದಕ್ಕೆ ಮೈಸೂರು ಟ್ರಾಫಿಕ್ ಪೊಲೀಸರು ರೆಡಿಯಾಗಿದ್ದು, ಇಂದಿನಿಂದ ಒಂದು ತಿಂಗಳವರೆಗೆ ಪ್ರಾಯೋಗಿಕವಾಗಿ ನೂತನ ನಿಯಮ ಜಾರಿಯಾಗಲಿದೆ. ನಗರದ 10 ಕಡೆಗಳಲ್ಲಿ ಸ್ವಯಂ ಪ್ರೇರಿತ ತಪಾಸಣಾ ಕೇಂದ್ರಗಳ ನಿರ್ಮಾಣ ಮಾಡಲಾಗಿದೆ.
ಕೋಟೆ ಆಂಜನೇಯಸ್ವಾಮಿ ಮಂಭಾಗದಲ್ಲಿ ಸ್ವಯಂ ಪ್ರೇರಿತ ತಪಾಸಣಾ ಕೇಂದ್ರ ತೆರೆಯಲಾಗಿದ್ದು ಇಲ್ಲಿಗೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಆಗಮಿಸಿ ಮಾಹಿತಿ ಪಡೆಯುತ್ತಿದ್ದಾರೆ. ಇನ್ನು ಮಾಹಿತಿ ಪಡೆಯಲು ಆಗಮಿಸುವ ಸಾರ್ವಜನಿಕರಿಗೆ ಪೊಲೀಸರು ಮಜ್ಜಿಗೆ ನೀಡಿ ಸತ್ಕರಿಸುತ್ತಿದ್ದಾರೆ.
ಇನ್ನು ಸಂಚಾರಿ ಪೊಲೀಸರ ವರ್ತನೆ ಕಂಡು ಸಾರ್ವಜನಿಕರು ಫುಲ್ ಖುಷ್ ಆಗಿದ್ದು, ಈ ಮಧ್ಯೆ ಕೆಲ ಸಾರ್ವಜನಿಕರು ಮಾಹಿತಿ ಪಡೆದು ಬಾಕಿಯಿರುವ ಪ್ರಕರಣಕ್ಕೆ ದಂಡ ಪಾವತಿಸಿ ಮಾದರಿಯಾದರು. ಈ ನಡುವೆ ನಿರ್ಭೀತಿಯಿಂದ ಆಗಮಿಸಿ ಮಾಹಿತಿ ಪಡೆಯುವಂತೆ ಸಾರ್ವಜನಿಕರಿಗೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ. ಒಂದು ವೇಳೆ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿದ್ದಲ್ಲಿ ದಂಡ ಪಾವತಿಸಲು ಸಮಯಾವಕಾಶ ನೀಡಲಾಗಿದೆ.
Key words: New Improved- Traffic Control –Index-mysore-Traffic Police