ಚೆನ್ನೈ,ಮಾ,12,2020(www.justkannada.in): ದೇಶದ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸುವ ಅಗತ್ಯವಿದೆ. ಶೀಘ್ರದಲ್ಲೇ ನಾನು ಹೊಸ ಪಕ್ಷ ಘೋಷಣೆ ಮಾಡುತ್ತೇನೆ. ಅದರಲ್ಲಿ ಯುವಕರಿಕೆ ಆದ್ಯತೆ ನೀಡುತ್ತೇನೆ ಎಂದು ನಟ ಸೂಪರ್ ಸ್ಟಾರ್ ರಜಿನಿಕಾಂತ್ ತಿಳಿಸಿದರು.
ಚೆನ್ನೈ ನ ಖಾಸಗಿ ಹೋಟೇಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ ರಜಿನಿಕಾಂತ್, ನನ್ನ ರಾಜಕೀಯ ಪ್ರವೇಶದ ಬಗ್ಗ 15 ವರ್ಷಗಳಿಂದಲೂ ಊಹಾಪೂಹವಿದೆ. 1996ರಿಂದಲೂ ನನ್ನ ಹೆಸರು ರಾಜಕಾರಣದ ಜತೆ ಸೇರಿತ್ತು. 2017ರಲ್ಲಿ ನಾನು ರಾಜಕೀಯ ಪ್ರವೇಶ ಮಾಡಿದ್ದೆ. ಸರ್ಕಾರದ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ. ರಾಜಕೀಯ ಪಕ್ಷಗಳು ಮತಕ್ಕಾಗಿ ಮಾತ್ರ ಜನರ ಬಳಿ ಹೋಗುತ್ತವೆ. Iಈ ವ್ಯವಸ್ಥೆಯನ್ನ ಬದಲಾಯಿಸುವುದೇ ನಮ್ಮ ಉದ್ದೇಶ. ಆದರೆ ನನಗೆ ರಾಜ್ಯದ ಸಿಎಂ ಆಗಬೇಕೆಂದು ನಾನು ಬಯಸಿಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದರು.
ರಾಜ್ಯದಲ್ಲಿ ಜಯಲಲಿತಾ ಬಳಿಕ ಪ್ರಬಲ ನಾಯಕತ್ವದ ಕೊರತೆಯಿದೆ. ರಾಜಕಾರಣದಲ್ಲಿ 50 ವರ್ಷ ತುಂಬಿದವರೇ ಹೆಚ್ಚಿದ್ದಾರೆ.. ನಿವೃತ ಐ.ಪಿ.ಎಸ್ , ಐ.ಎ.ಎಸ್ ಅಧಿಕಾರಿಗಳಿಗೆ ಪಕ್ಷಕ್ಕೆ ಆಹ್ವಾನ ನೀಡಿ ಪಕ್ಷವನ್ನು ಬಲಿಷ್ಠ ಗೊಳಿಸುತ್ತೇನೆ. ನಮ್ಮ ಪಕ್ಷದಲ್ಲಿ 60 ರಿಂರ 65ರಷ್ಟು ಯುವಕರಿಗೆ ಅವಕಾಶ ನೀಡುತ್ತೇನೆ. ನಮ್ಮ ಪಕ್ಷದಲ್ಲಿ ನಾನು ಮುಖ್ಯಸ್ಥನಾಗಿರುತ್ತೇನೆ. ನನ್ನ ಪಕ್ಷದಲ್ಲಿ ಅನಗತ್ಯವಾಗಿ ಸಂಪನ್ಮೂಲಗಳಿಗೆ ಖರ್ಚು ಮಾಡುವುದಿಲ್ಲ.
ಕೆಲಸ ಮಾಡದವರಿಗೆ ನನ್ನ ಪಕ್ಷದಲ್ಲಿ ಅವಕಾಶವಿಲ್ಲ . ದೇಶದ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸುವ ಅಗತ್ಯವಿದೆ. ರಾಜಕೀಯ ಪಕ್ಷಗಳು ಮತಕ್ಕಾಗಿ ಮಾತ್ರ ಜನರ ಬಳಿ ಹೋಗುತ್ತವೆ. ಯುವ ಜನತೆ ರಾಜಕೀಯದಲ್ಲಿ ಹೆಚ್ಚಾಗಿ ತೊಡಗಿಕೊಳ್ಳಬೇಕೆಂದು ನಟ ರಜಿನಿಕಾಂತ್ ತಿಳಿಸಿದರು.
Key words: New party -announcement –soon-chennai- Actor- Rajinikanth