ಬೆಂಗಳೂರು, ಜೂನ್ 13, 2020 (www.justkannada.in): ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣಕ್ಕೆ ಹೊಸ ಟರ್ಫ್ ಅಳವಡಿಕೆ ಕಾರ್ಯ ವೇಗವಾಗಿ ಸಾಗುತ್ತಿದೆ.
ಇನ್ನೊಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಅಂದಹಾಗೆ ಕರ್ನಾಟಕ ಫುಟ್‌ಬಾಲ್ ಸಂಸ್ಥೆ ತನ್ನದೇ ಹಣದಲ್ಲಿ ಕ್ರೀಡಾಂಗಣಕ್ಕೆ ಟರ್ಫ್ ಖರೀದಿ ಮಾಡಿದೆ.
ಒಟ್ಟಾರೆ 1.75 ಕೋಟಿ ರೂ. ಟರ್ಫ್ ಖರೀದಿಗೆ ವೆಚ್ಚವಾಗಿದೆ, ಕೊರೊನಾದಿಂದಾಗಿ ಲಾಕ್‌ಡೌನ್ ಆಗುವ ಎರಡು ದಿನಕ್ಕೆ ಮೊದಲು ಇಟಲಿಯಿಂದ ಬೆಂಗಳೂರಿಗೆ ಟರ್ಫ್ ಬಂದಿತ್ತು.
ನೈಸರ್ಗಿಕವಾಗಿರುವ ಹುಲ್ಲಿನಿಂದ ಮಾಡಲ್ಪಟ್ಟ ಹೊದಿಕೆಯನ್ನು ಕ್ರೀಡಾಂಗಣಕ್ಕೆ ಅಳವಡಿಸಿದರೆ ಅದರಲ್ಲಿ ದಿನವೊಂದಕ್ಕೆ ಹೆಚ್ಚು ಪಂದ್ಯಗಳನ್ನು ಆಡಿಸಲು ಸಾಧ್ಯವಿಲ್ಲ. ಹೀಗಾಗಿ ಟರ್ಫ್ ಅಳವಡಿಕೆ ಮಾಡಿಸಲಾಗುತ್ತಿದೆ.