ನೂತನ ವಿಜಯನಗರ ಜಿಲ್ಲೆ ಅಧಿಕೃತವಾಗಿ ಘೋಷಣೆ…

ಬೆಂಗಳೂರು,ಫೆಬ್ರವರಿ,8,2021(www.justkannada.in):   ನೂತನ ವಿಜಯನಗರ ಜಿಲ್ಲೆಯನ್ನ ಅಧಿಕೃತವಾಗಿ ಘೋಷಣೆ ಮಾಡಿ ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.jk

ರಾಜ್ಯದ 31ನೇ ಜಿಲ್ಲೆಯಾಗಿ ರಾಜ್ಯ ಸರ್ಕಾರ ವಿಜಯನಗರವನ್ನು ಘೋಷಣೆ ಮಾಡಿ ಅಧಿಕೃತವಾಗಿ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಘೋಷಣೆಯಾಗಿದೆ.

ಈ ಕುರಿತು ಕಂದಾಯ ಇಲಾಖೆ(ಭೂ ಮಾಪನ) ಸರ್ಕಾರದ ಅಧೀನ ಕಾರ್ಯದರ್ಶಿ ವಿಟಿ ರಾಜಶ್ರೀ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ( 1964ರ ಕರ್ನಾಟಕ ಅಧಿನಿಯಮ ಸಂಖ್ಯೆ 12)ರ 6ನೇ ಪ್ರಕರಣದ ಮೇರೆಗೆ ಅಗತ್ಯ ಪಡಿಸಲಾದಂತೆ ಬಳ್ಳಾರಿಯ ಜಿಲ್ಲೆಯ ಸರಹದ್ದುಗಳನ್ನು ಮಾರ್ಪಡಿಸಿ, ವಿಜಯ ನಗರ ಜಿಲ್ಲೆ ಎಂಬ ಹೆಸರಿನ ನೂತನ ಜಿಲ್ಲೆಯನ್ನು ರಚಿಸಲಾಗಿದೆ.

ಕೃಪೆ-internet

ವಿಜಯನಗರ ಜಿಲ್ಲೆಗೆ 6 ತಾಲ್ಲೂಕುಗಳನ್ನ ಸೇರಿಸಲಾಗಿದೆ. ಹೊಸಪೇಟೆ, ಕೂಡ್ಲಗಿ, ಹಗರಿ ಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ,  ಹರಪನಹಳ್ಳಿ ತಾಲ್ಲೂಕುಗಳನ್ನ ನೂತನ ವಿಜಯನಗರ ಜಿಲ್ಲೆಗೆ ಸೇರಿಸಲಾಗಿದೆ. ಹೊಸಪೇಟೆಯನ್ನ ಕೇಂದ್ರಕಾರ್ಯಸ್ಥಾನ ಮಾಡಲಾಗಿದೆ. 2020 ಡಿಸೆಂಬರ್ 14 ರಂದು ಬಳ್ಳಾರಿ ಜಿಲ್ಲೆಯನ್ನ ವಿಭಜಿಸಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.

Key words: New- Vijayanagar- District -Officially -Announced.