ಮೈಸೂರು,ಡಿ,28,2019(www.justkannada.in): ಹೊಸ ವರ್ಷ ಬರಮಾಡಿಕೊಳ್ಳಲು ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ. ಈ ನಡುವೆ ನೂತನ ವರ್ಷಾಚರಣೆ ಮೇಲೆ ಮೈಸೂರು ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ನಗರಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದರು.
ಮೈಸೂರಿನಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ , ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ತೊಂದರೆಯಾಗದಂತೆ ಹೊಸವರ್ಷ ಸಂಭ್ರಮಿಸುವಂತೆ ಕರೆ ನೀಡಿದರು.
ಹೊಸ ವರ್ಷಾಚರಣೆ ಶುಭಾಶಯ ಮಾಡುವ ನೆಪದಲ್ಲಿ ಅನುಚಿತ ವರ್ತನೆ ತೋರಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಹೊಸ ವರ್ಷಾಚರಣೆ ವೇಳೆ ಅಂದು ಸಾರ್ವಜನಿಕ ಸ್ಥಳಗಳಲ್ಲಿ ಡಿಜೆ, ಸೌಂಡ್ಸ್ ಗಳಿಗೆ ನಿಷೇಧ ಹೇರಲಾಗಿದ್ದು, ಡ್ರಿಂಕ್ ಅಂಡ್ ಡ್ರೈವ್, ಸಂಚಾರಿ ಉಲ್ಲಂಘಿಸುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ರಾತ್ರಿ ಇಡೀ ನಗರದೆಲ್ಲೆಡೆ ಪೊಲೀಸ್ ಗಸ್ತು ತಿರುಗುತ್ತಿರುತ್ತಾರೆ ಎಂದು ಮಾಹಿತಿ ನೀಡಿದರು.
ಇನ್ನು ಅಂದು ಸಂಜೆ 7ರ ನಂತರ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧವಿರುತ್ತದೆ. ಬೆಟ್ಟದ ನಿವಾಸಿಗಳಿಗೆ 9ಗಂಟೆಯ ತನಕ ಮಾತ್ರ ಪ್ರವೇಶವಿದ್ದು, ಬಾರ್ ಮತ್ತು ರೆಸ್ಟೋರೆಂಟ್ ಗಳ ಮೇಲೆ ತೀವ್ರ ನಿಗಾ ಇಡಲಾಗುವುದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಹೇಳಿದರು.
Key words: New Year – action – inappropriate behavior Mysore city -Police Commissioner -KT Balakrishna