ಬೆಂಗಳೂರು,ಡಿಸೆಂಬರ್,31,2024 (www.justkannada.in) ಇಂದು ಹೊಸ ವರ್ಷದ ಸಂಭ್ರಮಕ್ಕೆ ರಾಜ್ಯ ರಾಜಧಾನಿ ಬೆಂಗಳೂರು ಸಜ್ಜಾಗಿದ್ದು ಈ ಮಧ್ಯೆ ಇಂದು ತಡರಾತ್ರಿವರೆಗೆ ‘ಬಿಎಂಟಿಸಿ ಬಸ್’ ಸಂಚಾರಕ್ಕೆ ಬಿಎಂಟಿಸಿ ನಿರ್ಧರಿಸಿದೆ.
ಹೊಸ ವರ್ಷಾಚರಣೆಗೆ ತೊಡಗುವವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಿಎಂಟಿಸಿ ಈ ಕ್ರಮ ಕೈಗೊಂಡಿದೆ. ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಎಂ.ಜಿ.ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ರಾತ್ರಿ 11:00 ಗಂಟೆಯ ನಂತರ ತಡರಾತ್ರಿ 02:00 ಗಂಟೆಯವರೆಗೆ ಪ್ರಯಾಣಿಕರ ಸಂಚಾರದ ಒತ್ತಡಕ್ಕನುಗುಣವಾಗಿ ಹೆಚ್ಚುವರಿ ಬಸ್ ಗಳನ್ನ ಕಾರ್ಯಚರಣೆಗೆ ಇಳಿಸಲಿದೆ.
1 G-3 ಬ್ರಿಗೇಡ್ ರಸ್ತೆ, ಎಲೆಕ್ಟ್ರಾನಿಕ್ಸ್ ಸಿಟಿ, G-4 ಜಿಗಣಿ, G-2 ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಸರ್ಜಾಪುರ, G-6 ಕೆಂಗೇರಿ ಕೆ.ಹೆಚ್.ಬಿ. ಕ್ವಾರ್ಟ್ರ್ಸ್, G-7 ಜನಪ್ರಿಯ ಟೌನ್ ಶಿಪ್, G-8 ನೆಲಮಂಗಲ, G-9 ಯಲಹಂಕ ಉಪನಗರ 5ನೇ ಹಂತ, G-10 ಯಲಹಂಕ, G-11 ಬಾಗಲೂರು, 317-G ಹೊಸಕೋಟೆ, SBS-13K ಚನ್ನಸಂದ, SBS-1K ಕಾಡುಗೋಡಿ, 13 ಬನಶಂಕರಿ
ಹಾಗೆಯೇ ಜನದಟ್ಟಣೆ ಇರುವ ಪ್ರಮುಖ ಬಸ್ ನಿಲ್ದಾಣ/ಜಂಕ್ಷನ್ ಗಳಾದ ಕೆಂಪೇಗೌಡ ಬಸ್ ನಿಲ್ದಾಣ, ಕೆಆರ್ ಮಾರ್ಕೆಟ್ , ಶಿವಾಜಿನಗರ, ಕೋರಮಂಗಲ, ಕಾಡುಗೋಡಿ, ಕೆಂಗೇರಿ, ಸುಮನಹಳ್ಳಿ, ಗೊರಗುಂಟೆಪಾಳ್ಯ, ಯಶವಂತಪುರ, ಯಲಹಂಕ, ಶಾಂತಿನಗರ, ಬನಶಂಕರಿ, ಹೆಬ್ಬಾಳ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಗಳಿಂದ ಪ್ರಯಾಣಿಕರ ದಟ್ಟಣೆ/ಬೇಡಿಕೆಗನುಗುಣವಾಗಿ ಸಾರಿಗೆ ಸೌಲಭ್ಯವನ್ನು ಕಲ್ಪಿಸಲು ಬಿಎಂಟಿಸಿ ಮುಂದಾಗಿದೆ.
Key words: New Year, BMTC bus, until, late tonight