ಬೆಂಗಳೂರು, ಡಿಸೆಂಬರ್,28,2024 (www.justkannada.in): ಹೊಸ ವರ್ಷಾಚರಣೆಗೆ ರಾಜ್ಯ ರಾಜಧಾನಿ ಬೆಂಗಳೂರು ಸಜ್ಜಾಗುತ್ತಿದ್ದು ಈ ಮಧ್ಯೆ ಹೊಸ ವರ್ಷಾಚರಣೆಗೆ ಪೊಲೀಸ ಇಲಾಖೆಯಲ್ಲಿ ಸಭೆ ನಡೆಸಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಈ ಕುರಿತು ಮಾತನಾಡಿ ಮಾಹಿತಿ ನೀಡಿದ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್, ಹೊಸ ವರ್ಷಾಚರಣೆಗೆ ಪೊಲೀಸ್ ಇಲಾಖೆಗಳ ಜತೆ ಸಭೆ ನಡೆಸಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಹೊಸವರ್ಷಾಚರಣೆ ವೇಳೆ ಎಂ ಜಿ ರೋಡ್ ಮೆಟ್ರೋ ಬಂದ್ ಆಗಲಿದೆ. ಎಂಜಿ ರೋಡ್, ಬ್ರಿಗೇಡ್ ರೋಡ್ ಕೋರ ಮಂಗಲ, ಇಂದಿರಾ ನಗರ ಸೇರಿ ಹಲವೆಡೆ ಸಿಸಿಟಿವಿ ಹಾಕಲಾಗುತ್ತದೆ. ಮಾಸ್ಕ್ ನಿಷೇಧಿಸಲಾಗಿದೆ. ಡ್ರಂಕ್ ಅಂಡ್ ಡ್ರೈವ್ ಮಾಡಿದರೇ ಪರವಾನಿಗೆ ರದ್ದು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
Key words: New Year, License, Cancel, drunk driving