ಅಕ್ಲೆಂಡ್,ಡಿಸೆಂಬರ್,31,2024 (www.justkannada.in): ಆಗಸದಲ್ಲಿ ಬೆಳಕಿನ ಚಿತ್ತಾರ, ಭಿನ್ನ ಭಿನ್ನ ರೀತಿಯ ಪಟಾಕಿ ಸಿಡಿತ. ನ್ಯೂಜಿಲ್ಯಾಂಡ್ ನಲ್ಲಿ ಹೊಸ ವರ್ಷ 2025ಕ್ಕೆ ವೆಲ್ ಕಮ್.
ನ್ಯೂಜಿಲ್ಯಾಂಡ್ ನಲ್ಲಿ ಅದ್ಧೂರಿಯಾಗಿ ಹೊಸವರ್ಷವನ್ನ ಬರಮಾಡಿಕೊಂಡಿದ್ದು, ನ್ಯೂಜಿಲ್ಯಾಂಡ್ ನ ಅಕ್ಲೆಂಡ್ ಜನತೆ ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಹೊಸ ವರ್ಷ 2025 ಸ್ವಾಗತಿಸಿದ್ದಾರೆ. ನ್ಯೂಜಿಲೆಂಡ್ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದ ಮೊದಲ ದೇಶವಾಗಿದೆ. 2024ಕ್ಕೆ ವಿದಾಯ ಹೇಳಿ 2025ಕ್ಕೆ ಹಲೋ ಎನ್ನುವ ಮೂಲಕ ನ್ಯೂಜಿಲೆಂಡ್ ಜನರು ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ.
ನ್ಯೂಜಿಲೆಂಡ್ನ ಆಕ್ಲೆಂಡ್ ನಲ್ಲಿ ಭರ್ಜರಿ ಪಟಾಕಿಗಳನ್ನು ಸಿಡಿಸಲಾಗಿದ್ದು, ಅಲ್ಲಿನ ಸ್ಕೈ ಟವರ್ ಬಳಿ ಸಾವಿರಾರು ಜನ ಸೇರಿ ಹೊಸವರ್ಷವನ್ನು ಸ್ವಾಗತಿಸಿದ್ದಾರೆ. ಈ ಟವರ್ ಮೇಲೆ ಲೇಸರ್ ಮತ್ತು ಅನಿಮೇಶನ್ ಮೂಲಕ ಹೊಸವರ್ಷದ ಚಿತ್ತಾರ ಮೂಡಿಸಲಾಯಿತು. ನ್ಯೂಜಿಲೆಂಡ್ ನ ಉಳಿದ ನಗರಗಳಲ್ಲೂ ಹೊಸವರ್ಷ ಸಂಭ್ರಮಾಚರಣೆ ಜೋರಾಗಿ ನಡೆದಿದೆ.
ಇನ್ನು ಭಾರತದಲ್ಲೂ ಹೊಸ ವರ್ಷ ಬರಮಾಡಿಕೊಳ್ಳಲು ಸಜ್ಜಾಗಿದ್ದು ಇಂದು ಮಧ್ಯರಾತ್ರಿ ಜನರು 2025 ಅನ್ನು ಬರಮಾಡಿಕೊಂಡು ಸಂಭ್ರಮಿಸಲಿದ್ದಾರೆ.
Key words: New Year, Celebration, New Zealand, Welcomes, 2025