ಬೆಂಗಳೂರು,ಡಿ,31,2019(www.justkannada.in): ಹೊಸ ವರ್ಷ ಸಂಭ್ರಮಾಚರಣೆಗೆ ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಹೊಸ ವರ್ಷಾಚರಣೆ ಹಿನ್ನೆಲೆ ಕೆಲ ರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. ಅನಿಲ್ ಕುಂಬ್ಳೆ ಸರ್ಕಲ್ ನಿಂದ ಮೇಯೋಹಾಲ್ ಜಂಕ್ಷನ್ ವರೆಗೆ, ಕಾವೇರಿ ಎಂಪೋರಿಯಂನಿಂದ ಅಪೇರಾ ಜಂಕ್ಷನ್ ವರೆಗೆ, ಬ್ರಿಗೇಡ್ ರೋಡ್ ನಿಂದ ಮ್ಯೂಸಿಯಂ ರೋಡ್ ವರೆಗೆ, ಎಂಜಿ ರೋಡ್ ನಿಂದ ಎಸ್ ಬಿಐ ಸರ್ಕಲ್ ವರೆಗೆ ರಾತ್ರಿ 10 ಗಂಟೆಯಿಂದ 2 ಗಂಟೆವರೆಗೆ ಸಂಚಾರ ನಿಷೇಧಿಸಲಾಗಿದೆ.
ಇನ್ನು 170 ಸ್ಥಳಗಳಲ್ಲಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡಲಾಗುವುದು. ಮದ್ಯ ಸೇವಿಸಿ ವಾಹನ ಚಲಾಯಿಸಿದರೇ ವಾಹನ ಜಪ್ತಿ ಜತೆಗೆ ಡಿಎಲ್ ರದ್ದುಗೊಳಿಸಲಿದ್ದಾರೆ. ಸೆಕ್ಷನ್ 279ರಡಿ ಪೊಲೀಸರು ಕೇಸ್ ದಾಖಲಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೊಸ ವರ್ಷಾಚರಣೆ ವೇಳೆ ಮಾದಕ ವಸ್ತು ಬಳಸುವ ಸಾಧ್ಯತೆ ಹಿನ್ನೆಲೆ, ಮಾದಕ ವಸ್ತು ತಪಾಸಣೆಗೆ ವಿಶೇಷ ತಂಡ ರಚಿಸಲಾಗಿದೆ. ಶ್ವಾನದಳದಿಂದ ಪರಿಶೀಲನೆ ನಡೆಸಲಿದ್ದಾರೆ. ಬೆಂಗಳೂರಿಗರು ನೂತನ ವರ್ಷ ಬರಮಾಡಿಕೊಂಡು ಸಂಭ್ರಮಿಸಲು ಕಾತರದಿಂದ ಕಾಯುತ್ತಿದ್ದಾರೆ.
Key words: New Year-celebration-Bangalore-Traffic restriction -drunk and drive