ಹೊಸ ವರ್ಷಾಚರಣೆ: ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣಗಳಿಗೆ ನಿರ್ಬಂಧ

ಚಿಕ್ಕಮಗಳೂರು,ಡಿಸೆಂಬರ್,30,2024 (www.justkannada.in):  ಹೊಸವರ್ಷಾಚರಣೆಗೆ ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ.

ಈ ಕುರಿತು ಮಾತನಾಡಿರುವ ಚಿಕ್ಕಮಗಳೂರು ಜಿಲ್ಲಾ ಎಸ್ ಪಿ ವಿಕ್ರಮ್ ಆಮ್ಟೆ, ಚಿಕ್ಕಮಳೂರಿನ ಮುಳ್ಳಯ್ಯನಗಿರಿ ಸೇರಿ ಪ್ರಮುಖ ಪ್ರವಾಸಿ ತಾಣಗಳಿಗೆ ನಾಳೆ ಸಂಜೆ 6 ರಿಂದ ಜನವರಿ 1 ಬೆಳಿಗ್ಗೆ 6ಗಂಟೆವರೆಗೆ ನಿರ್ಬಂಧವಿಧಿಸಲಾಗಿದೆ.  ರೇವ್ ಪಾರ್ಟಿ,  ಡ್ರಗ್ಸ್  ಪಾರ್ಟಿ ಆಚರಿಸದಂತೆ ಎಚ್ಚರಿಕೆ ನೀಡಿದರು.

ಕುಡಿದು ವಾಹನ ಚಾಲನೆ ಮಾಡಿದರೇ ಕೇಸ್ ಹಾಕಲಾಗುತ್ತದೆ.  ಲಾಡ್ಜ್ ವೈನ್ ಶಾಪ್  ಹೋಮ್ ಸ್ಟೇ, ಜೊತೆ ಸಭೆ ನಡೆಸುತ್ತೇವೆ.  ರಾತ್ರಿ ವೇಳೆ ಸೌಂಡ್ ಸಿಸ್ಟಮ್ ಹಾಕುವಂತಿಲ್ಲ. ಪಾರ್ಟಿ ಗಳ ಮೇಲೆ ಯಾವುದೇ ಸಂಘಟನೆಗಳು ದಾಳಿ ಮಾಡಿವಂತಿಲ್ಲ. ಪಾರ್ಟಿ ಬಗ್ಗೆ ಅನುಮಾನ ಬಂದರೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ವಿಕ್ರಮ್ನ ಆಮ್ಟೆ ತಿಳಿಸಿದ್ದಾರೆ.

Key words: New Year, celebrations, Restrictions, tourist spots, Chikkamagaluru