ಬೆಂಗಳೂರು,ಡಿಸೆಂಬರ್,30,2020(www.justkannada.in): ಹೊಸ ವರ್ಷಕ್ಕೆ ಮಾರ್ಗಸೂಚಿ ಕೊಡಲಾಗಿದೆ. ಎಲ್ಲೂ ಕೂಡ ಸಾರ್ವಜನಿಕವಾಗಿ ಪಾರ್ಟಿ ನಡೆಸುವಂತಿಲ್ಲ. ಮೈಸೂರು, ಕೂರ್ಗ್ ನಲ್ಲಿ ಪಾರ್ಟಿಗೆ ಅವಕಾಶವಿಲ್ಲ ಡಿಜೆ ಇಟ್ಟುಕೊಂಡು ಪಾರ್ಟಿ ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಮಾಧ್ಯಮಗಳ ಜತೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಡಿಜಿ,ಪೊಲೀಸ್ ಆಯುಕ್ತರು ಈಗಾಗಲೇ ಹೇಳಿದ್ದಾರೆ. ನಾನು ಅವರ ಜೊತೆ ಚರ್ಚೆ ಮಾಡಿದ್ದೇನೆ. ಹೊಸ ವರ್ಷ ಮಾರ್ಗಸೂಚಿ ಕಡ್ಡಾಯ ಪಾಲನೆಗೆ ಸೂಚಿಸಿದ್ದೇನೆ. ಚರ್ಚ್ ಸ್ಟ್ರೀಟ್,ಕೋರಮಂಗಲ,ಇಂದಿರಾ ನಗರದಲ್ಲಿ ಹೆಚ್ಚು ಸೇರ್ತಿದ್ರು. ದೊಡ್ಡ ಪ್ರಮಾಣದಲ್ಲಿ ಜನ ಸೇರುತ್ತಿದ್ದರು ಆದ್ದರಿಂದ ಈ ಕ್ರಮ ತೆಗೆದುಕೊಂಡಿದ್ದೇವೆ ಎಂದರು.
ಸ್ಥಳೀಯ ಡಿಸಿಪಿಗಳಿಗೂ ಜವಾಬ್ದಾರಿ ಕೊಡಲಾಗಿದೆ. ಪಬ್ ಗಳ ಮೇಲೆ ಗಮನಕ್ಕೆ ಡಿಸಿಪಿಗೆ ಕೊಟ್ಟಿದ್ದೇವೆ. ಎಲ್ಲೂ ಕೂಡ ಸಾರ್ವಜನಿಕವಾಗಿ ಪಾರ್ಟಿ ನಡೆಸುವಂತಿಲ್ಲ. ಮೈಸೂರು,ಕೂರ್ಗ್ ನಲ್ಲಿ ಪಾರ್ಟಿಗೆ ಅವಕಾಶವಿಲ್ಲ. ಡಿಜೆ ಇಟ್ಟುಕೊಂಡು ಪಾರ್ಟಿ ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ಬಗ್ಗೆ ಅಲ್ಲಿನ ಎಸ್ ಪಿಗಳಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಸಹ ಸಹಕರಿಸಬೇಕು. ಕೋವಿಡ್ ಮಧ್ಯೆ ಜನರನ್ನ ಸೇರಿಸಿಕೊಳ್ಳಬಾರದು. ಜನರ ಆರೋಗ್ಯದ ಪ್ರಶ್ನೆ ಇಲ್ಲಿದೆ. ಒಂದು ವರ್ಷ ಮನೆಯೊಳಗಿದ್ದರೆ ಸಮಸ್ಯೆಯಿಲ್ಲ ಎಂದು ತಿಳಿಸಿದರು.
ಬ್ರಿಟನ್ ವೈರಸ್ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಬಸವರಾಜ ಬೊಮ್ಮಾಯಿ, ರೂಪಾಂತರಿ ವೈರಸ್ ಅಧಿಕೃತ ಮಾಹಿತಿ ಕೇಂದ್ರದಲ್ಲಿದೆ. ಕೇಂದ್ರ ಸರ್ಕಾರ ಸಂಪೂರ್ಣವಾಗಿ ಪರಿಶೀಲಿಸುತ್ತಿದೆ. ಐಸಿಎಂಆರ್ ,ಹೆಲ್ತ್ ಡಿಪಾರ್ಟ್ ಮೆಂಟ್ ಗಮನಿಸುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸಿಎಂಗೆ ಸೂಚನೆ ನೀಡುತ್ತದೆ. ಆಗ ಸಿಎಂ ಇಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
key words: New Year-Not- all parties – publicly- Home Minister- Basavaraja Bommai.