ಮೈಸೂರು,ಡಿಸೆಂಬರ್,31,2020(www.justkannada.in) : ಪ್ರತಿ ದಿನ ಹೊಸ ವರ್ಷವೇ. ವರ್ಷದ ಸಂಭ್ರಮ ಮುಂದೆಯೂ ಮಾಡಬಹುದು. ಹೊಸ ವರ್ಷಕ್ಕೆ ಎಲ್ಲರೂ ಕೊರೊನಾ ನಿಯಮ ಪಾಲಿಸಿ ಎಂದು ನಟ ವಸಿಷ್ಠ ಸಿಂಹ ಅಭಿಮಾನಿಗಳಿಗೆ ಕಿವಿಮಾತು ಹೇಳಿದರು.
ಮೈಸೂರಿನ ಹನುಮಂತೋತ್ಸವ ಸಮಿತಿಯಿಂದ ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಬುಧವಾರ ಆಯೋಜಿಸಿದ್ದ ಹನುಮಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾವಿರಾರು ಜನ ಸೇರುವ ಕಾರ್ಯಕ್ರಮ, ಜಯಂತಿಗಳೇ ರದ್ದಾಗಿವೆ. ಹೊಸ ವರ್ಷದ ಪಾರ್ಟಿ ರದ್ದಾದಲ್ಲಿ ತಪ್ಪೇನು. ಸದ್ಯ ಕೊರೊನಾ ಲಸಿಕೆ ಬರುವವರೆಗೆ ಎಲ್ಲರು ಜಾಗೃತಿಯಿಂದ ಇರೋಣ ಎಂದರು .
ಹೊಸ ವರ್ಷಕ್ಕೆ ನಾನು ಕೂಡ ಹೊಸ ಸಂಕಲ್ಪ ಮಾಡಿದ್ದೇನೆ. ಬನ್ನೇರುಘಟ್ಟದಲ್ಲಿ ಪ್ರಾಣಿ ದತ್ತು ಪಡೆಯುತ್ತಿದ್ದೇನೆ. ನೀವೂ ಕೂಡ ಹೊಸ ಸಂಕಲ್ಪದೊಂದಿಗೆ ಹೊಸ ವರ್ಷ ಆರಂಭಿಸಿ ಎಂದು ತಿಳಿಸಿದರು.ಕೋವಿಡ್ ಕಾರಣದಿಂದ ಅದ್ದೂರಿಯಾಗಿ ಆಚರಣೆಗೆ ಬ್ರೇಕ್ ಹಾಕಿದ್ದ ಕಾರಣ, ಕೇವಲ ಹನುಮ ಪೂಜೆಗೆ ಮಾತ್ರ ಸೀಮಿತ. ಕೋವಿಡ್ ಕಾರಣದಿಂದ ಮೆರವಣಿಗೆ ಬ್ರೇಕ್ ಹಾಕಲಾಗಿತ್ತು. ಹನುಮಜಯಂತಿ ಆಚರಣ ಸಮಿತಿ ಸದಸ್ಯರು, ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಮಹೇಂದ್ರ ಸಿಂಗ್ ಕಾಳಪ್ಪ ಹಾಗೂ ಹನುಮ ಭಕ್ತರು ಭಾಗವಹಿಸಿದ್ದರು.
key words : New year-Everybody-Corona-rule-Policy-Actor-Vasishtha shinmha-Advice …!