ಮೈಸೂರು,ನವೆಂಬರ್,09,2020(www.justkannada.in) : ಪ್ರೀ ವೆಡ್ಡಿಂಗ್ ಫೋಟೋಗಳೇ ಜೀವನದ ಕೊನೆಯಾದವು. ಮೈಸೂರು ಜಿಲ್ಲೆಯಲ್ಲೊಂದು ಹೃದಯ ವಿದ್ರಾವಕ ಘಟನೆ.
ಮದುವೆಗೂ ಮುನ್ನವೇ ವಧು-ವರ ಧಾರುಣ ಸಾವು
ತಿ.ನರಸೀಪು ತಾಲೂಕಿನ ಮುಡುಕುತೊರೆ ಬಳಿ ಫೋಟೋಶೂಟ್ ನಡೆಸುವ ಸಂದರ್ಭ ತೆಪ್ಪ ಮಗುಚಿ ಮದುವೆಗೂ ಮುನ್ನವೇ ವಧು-ವರ ಧಾರುಣ ಸಾವನ್ನಪ್ಪಿದ್ದಾರೆ.
ಮೂಲತಃ ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾದ ಚಂದ್ರು(28), ಶಶಿಕಲಾ(20) ಮೃತ ದುರ್ದೈವಿಗಳು. ನ.22ರಂದು ಚಂದ್ರು, ಶಶಿಕಲಾ ಮದುವೆ ನಿಶ್ಚಯವಾಗಿತ್ತು.
ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಲು ಕಾವೇರಿ ನದಿ ಮಧ್ಯೆ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದರು. ಮದುವೆ ಹುಡುಗ, ಹುಡುಗಿಗೆ ಒಂದು ತೆಪ್ಪ ಹಾಗೂ ಫೋಟೋಗ್ರಾಫರ್, ಸಂಬಂಧಿಕರಿಗೆ ಮತ್ತೊಂದು ತೆಪ್ಪ. ಹೀಗೆ ಎರಡು ತೆಪ್ಪದಲ್ಲಿ ಹೋಗಿದ್ದರು.
ಹರಿಯುವ ನೀರಲ್ಲಿ ತೆಪ್ಪದ ಮೇಲೆ ನಿಂತು ಪೋಸ್ ಕೊಡುವ ಸಂದರ್ಭ ತೆಪ್ಪ ಮಗುಚಿದೆ. ಚಂದ್ರು, ಶಶಿಕಲಾ ನೀರಿನಲ್ಲಿ ಮುಳುಗಿದ್ದು, ಶವಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ತಲಕಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
key words : New-Bride-Groom-Waterproof-Pre-Wedding- Photoshoot