ದೇಶದಲ್ಲಿ ಕೊರೋನಾ ಏರಿಳಿತ: ಹೊಸದಾಗಿ 12,885 ಕೋವಿಡ್ ಪ್ರಕರಣಗಳು ಪತ್ತೆ.

ನವದೆಹಲಿ,ನವೆಂಬರ್,4,2021(www.justkannada.in): ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು ಕಳೆದ 24 ಗಂಟೆಗಳಲ್ಲಿ ಹೊಸದಾಗಿ 12,885 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ.

ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ 461 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಹಾಗೆಯೇ ಒಂದೇ ದಿನದಲ್ಲಿ  ಕೊರೊನಾದಿಂದ ಗುಣಮುಖರಾಗಿ 15,054 ಮಂದಿ ಡಿಸ್ಚಾರ್ಜ್‌ ಆಗಿದ್ದು, , ಒಟ್ಟು ಚೇತರಿಕೆ ದರವನ್ನು ಸುಮಾರು 98.22 ಪ್ರತಿಶತದಷ್ಟು ಆಗಿದೆ, ಭಾರತದಲ್ಲಿ COVID-19 ನ ಒಟ್ಟು ಸಕ್ರಿಯ ಪ್ರಕರಣಗಳು 1,48,579 ಕ್ಕೆ ಇಳಿದಿದೆ.

ನಿನ್ನೆ ದೇಶದಲ್ಲಿ 10,67,914 ಜನರಿಗೆ ಕೋವಿಡ್ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, 24 ಗಂಟೆಯಲ್ಲಿ 30,90,920 ಜನರಿಗೆ ಲಸಿಕೆ ನೀಡಲಾಗಿದೆ. ದೇಶದಲ್ಲಿ ಈವರೆಗೆ ಒಟ್ಟು 1,07,63,14,440 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ.

Key words: Newly -detected -12,885 cases – Covid – country.

ENGLISH SUMMARY..

12,885 new COVID cases reported
New Delhi, November 4, 2021 (www.justkannada.in): The Corona cases have started fluctuating in the country once again. 12,885 new cases have been reported across the country in the last 24 hours.
According to the information provided by the Union Health Ministry, 461 persons have lost their lives and 15,054 people have recovered and been discharged from the hospitals. The overall percentage of recovery is 98.22% and the total number of active cases is 1,48,759.
A total number of 10,67,914 COVID sample tests have been conducted in the country in the last 24 hours, and 30,90,920 people have been administered vaccination. Accordingly, the total number of doses has increased to 1,07,63,14,440.
Keywords: COVID-19 Pandemic/ 12885 new cases