ಬೆಂಗಳೂರು,ಅಕ್ಟೋಬರ್,18,2023(wwww.justkannada.in): ನೂತನವಾಗಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಸ್ಥಾಪನೆ ಮಾಡಲಾಗಿದ್ದು, ಸರ್ಕಾರಿ ಮಹಿಳಾ ನೌಕರರ ಸಂಕಷ್ಟಗಳಿಗೆ ನೆರವು ಅವರ ಹಿತರಕ್ಷಣೆಗಾಗಿ ಸಂಘಟನೆ ಸ್ಥಾಪಿಸಲಾಗಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ರೋಶಿನಿಗೌಡ ಹೇಳಿದರು.
ಈ ಸಂಬಂಧ ಕುರಿತು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಭಾರತದ ಸಂವಿಧಾನದಲ್ಲಿ ಲಿಂಗ ಸಮಾನತೆ ಹಕ್ಕನ್ನು ಪ್ರತಿಪಾದಿಸಲಾಗಿದೆ .ದೇಶದಲ್ಲಿ ದೇಶದ ಮಹಿಳಾ ರಾಷ್ಟ್ರಪತಿ ಮತ್ತು ಮಹಿಳಾ ಪ್ರಧಾನಿಯಾಗಿ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಮಹಿಳೆಯರಿಗೆ ನೋವು ಸಂಕಷ್ಟಗಳಿಗೆ ಮಹಿಳೆಯೇ ಚೆನ್ನಾಗಿ ಅರ್ಥಮಾಡಿಕೊಳ್ಳುವಳು. ಈ ನಿಟ್ಚಿನಲ್ಲಿ ಸರ್ಕಾರಿ ಮಹಿಳಾ ನೌಕರರ ಸಮಸ್ಯೆಗಳಿಗೆ ಸ್ಪಂದಿಸಲು ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಸ್ಪಾಪನೆಯಾಗಿದೆ ಎಂದರು.
ರಾಜ್ಯ ಸರ್ಕಾರದಲ್ಲಿ 2.50ಲಕ್ಷ ಮಹಿಳಾ ನೌಕರರು ಇದ್ದಾರೆ ಇಂದಿನಿಂದ ಸದಸ್ಯತ್ವ ಅಭಿಯಾನ ಆರಂಭಿಸಲಾಗುವುದು. ನಮ್ಮ ಸಂಘವು ಸರ್ಕಾರಿ ಮಹಿಳಾ ನೌಕರರ ಕುಂದೂಕೂರತೆಗಳಿಗೆ ಸ್ಪಂದಿಸುವುದು ಮತ್ತು ಸಂಭಂದಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಇಲಾಖೆಗಳೊಡನೆ ಚರ್ಚಿಸಿ ನ್ಯಾಯ ಒದಗಿಸುವುದು. ಮಹಿಳಾ ನೌಕರರಿಗೆ ಸಮಾನತೆ, ಜೇಷ್ಠತೆ, ಹಿತಾಸಕ್ತಿ ಸಹೋದರತೆ, ಸೌಹರ್ದತೆ ಭಾವನೆ ಬೆಳಸುವುದು.
ಮಹಿಳಾ ನೌಕರರಿಗೆ ಅನ್ಯರಿಂದ ತೊಂದರೆಯಾದಲ್ಲಿ ಉಚಿತವಾಗಿ ಕಾನೂನು ನೆರವು, ಕೆ.ಸಿ.ಎಸ್.ಆರ್.ನಡತೆ ನಿಯಮಗಳ ಸೇರಿದಂತೆ ಸೇವಾ ವಿಷಯಗಳು ಕುಟುಂಬ ಕಲ್ಯಾಣ, ವಿಮಾ ಯೋಜನೆ, ಸಣ್ಣ ಉಳಿತಾಯ, ಶಿಶುಪಾಲನಾ ರಜೆ ಇನ್ನಿತರ ವಿಷಯಗಳಲ್ಲಿ ಮಹಿಳಾ ನೌಕರರಿಗೆ ಅರಿವು ಮೂಡಿಸುವುದು. ಗಾಂಧಿ ಜಯಂತಿ , ಸ್ವಾತಂತ್ರ್ಯ ದಿನಾಚರಣೆ ಅಂಬೇಡ್ಕರ್ ದಿನಾಚರಣೆ, ಕಾರ್ಮಿಕರ ದಿನಾಚರಣೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಚರಿಸುವುದು. ಮಹಿಳಾ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ, ಕಣ್ಣಿನ ತಪಾಸಣೆ ಹಾಗೂ ರಕ್ತದಾನ ಶಿಬಿರಗಳನ್ನು ಏರ್ಪಡಿಸುವುದು ಎಂದು ಮಾಹಿತಿ ನೀಡಿದರು.
ಸರ್ಕಾರಿ ಮಹಿಳಾ ನೌಕರರಲ್ಲಿ ಸ್ವಸಹಾಯ ಗುಂಪು ರಚನೆ ಮತ್ತು ಸಿ ಮತ್ತು ಡಿ ದರ್ಜೆ ಮಹಿಳಾ ನೌಕರರ ಹೆಣ್ಣು ಮಕ್ಕಳ ವ್ಯಾಸಂಗಕ್ಕಾಗಿ ಧನಸಹಾಯ ಮತ್ತು ಮಹಿಳಾ ನೌಕರರ ಮಕ್ಕಳಿಗೆ ಸಾಮೂಹಿಕ ಮದುವೆ ಮಾಡಿ ವಿವಾಹ ವೆಚ್ಚ ಕಡಿಮೆ ಮಾಡುವುದು. ಪರಿಸರ ಜಾಗೃತಿ ಮೂಡಿಸಲು ಪರಿಸರ ದಿನಾಚರಣೆ ಮತ್ತು ಮಹಿಳಾ ನೌಕರರಿಗೆ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಹಿಳಾ ನೌಕರರ ಮಕ್ಕಳಿಗೆ ಅವಕಾಶ ನೀಡುವುದು ಮತ್ತು ಸಂಘದ ಸದಸ್ಯರಿಗೆ ರಿಕ್ರಿಯೋಷನ್ ಕ್ಲಬ್ ಮತ್ತು ಹೆಲ್ತ್ ಕ್ಲಬ್, ಜಿಮ್ ನಿಲಯಗಳನ್ನು ಸ್ಥಾಪಿಸುವುದು. ಸರ್ಕಾರಿ ಮಹಿಳಾ ನೌಕರರಿಗೆ ಪದೋನ್ನತಿ, ಮುಂಬಡ್ತಿ, ಸಂಬಳ, ಪಿಂಚಣಿ, ವರ್ಗಾವಣೆ, ಖಾಲಿ ಹುದ್ದೆಗಳ ಭರ್ತಿ, ನಿವೃತ್ತಿ, ಪ್ರಕರಣ ಕುರಿತು ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಮಹಿಳಾ ನೌಕರರುಗೆ ನೀಡುತ್ತಿರುವ ವೇತನ, ವಿವಿಧ ಯೋಜನೆಗಳ ಹಲವು ರೀತಿಯ ಅನುದಾನ ಬಗ್ಗೆ ಅರಿವು ಮೂಡಿಸುವುದು. ಮಹಿಳಾ ನೌಕರರ ಹಕ್ಕುಭಾದ್ಯತೆ ಅಧ್ಯಯನ ಪ್ರವಾಸ ಹಾಗೂ ಲಿಂಗ ತಾರತಮ್ಯ ಮುಕ್ತಗೊಳಿಸುವುದು. ಉತ್ತಮ ಮಹಿಳಾ ನೌಕರರಿಗೆ ಪ್ರಶಸ್ತಿ ನೀಡಿ ಸನ್ಮಾನಿಸುವುದು , ತಾವು ಕೆಲಸ ಮಾಡುವ ಸ್ಥಳಗಳಲ್ಲಿ ನಿರ್ಭಿತಿಯಿಂದ ಕೆಲಸ ಮಾಡಲು ಉತ್ತಮ ವಾತವರಣ ನಿರ್ಮಿಸುವುದು. ಮಹಿಳಾ ನೌಕರರಿಗೆ ಗ್ರಂಥಾಲಯ, ವಾಚನಾಲಯ ಸ್ಪಾಪನೆ ಹಾಗೂ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಶಿಷ್ಯವೇತನ, ಉನ್ನತ ವ್ಯಾಸಂಗಕ್ಕೆ ಮಕ್ಕಳಿಗೆ ಧನಸಹಾಯ ನೀಡುವುದು. ರಾಜ್ಯ ಸರ್ಕಾರಿ ಮಹಿಳಾ ನೌಕರರ ಹಿತರಕ್ಷಣೆಗಾಗಿ ನಮ್ಮ ಸಂಘ ಸ್ಪಾಪನೆಯಾಗಿದೆ . ಶೇಕಡ 50ರಷ್ಟು ಮಹಿಳಾ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ನಮ್ಮ ಸಂಘದ ಕಾರ್ಯನಿರ್ವಹಣೆಗೆ ಸರ್ಕಾರದ ಕಟ್ಟಡ ಮೂಂಜೂರು ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಸಂಘಟನೆಯ ಗೌರವಾಧ್ಯಕ್ಷರಾದ ಗೀತಾಮಣಿ, ಪ್ರಧಾನ ಕಾರ್ಯದರ್ಶಿ ಶಶಿಕಲಾ.ಕೆ. ಖಜಾಂಚಿ ಜಯಶೀಲಾ ಎನ್. ಹಾಗೂ ರಾಜ್ಯ ಕಾರ್ಯದರ್ಶಿ ಬಿ.ಎ.ಚೈತ್ರರವರು ಭಾಗವಹಿಸಿದ್ದರು.
Key words: Newly- established- All Karnataka State Government Women Employees- Association