ನವದೆಹಲಿ, ಏಪ್ರಿಲ್,1,2024 (www.justkannada.in): ಈ ಬಾರಿಯೂ ಕನ್ನಡಿಗರ ನೆಚ್ಚಿನ ನ್ಯೂಸ್ ಫಸ್ಟ್ ಸುದ್ದಿ ವಾಹಿನಿ ಪ್ರತಿಷ್ಠಿತ 12 ENBA ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದೆ. ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನ್ಯೂಸ್‌ಫಸ್ಟ್ ವಾಹಿನಿಗೆ ಪ್ರಶಸ್ತಿಗಳ ಮಳೆಯೇ ಹರಿದು ಬಂದಿದೆ.
ಚಿನ್ನ
- ಚೈತ್ರಾ ಕೇಸ್ ವಿಸ್ತೃತ ವರದಿ
- ನಾನು ಮುಖ್ಯಮಂತ್ರಿ
- ಬೆಂಗಳೂರು ಫಸ್ಟ್
- ಬೆಸ್ಟ್ ಆ್ಯಂಕರ್ : ವಿದ್ಯಾಶ್ರೀ
- ‘ಇಸ್ರೇಲ್ ವಾರ್ ಇಂಪ್ಯಾಕ್ಟ್ ಆನ್ ಕನ್ನಡಿಗಾಸ್’
- ಮತದಾನ ಜಾಗೃತಿ ವಿಭಾಗದಲ್ಲಿ ‘ಡ್ರಾಮಾಕ್ರಸಿ’ ವಿಶೇಷ ಕಾರ್ಯಕ್ರಮಕ್ಕೆ ಪ್ರಶಸ್ತಿ
ಬೆಳ್ಳಿ :
- ಏನ್ ಸಮಾಚಾರ
- ಇಂಡಿಯಾ ಫಸ್ಟ್
- ಸ್ಪೆಷಲ್ ರಿಪೋರ್ಟ್
ಕಂಚು :
- ಬೆಸ್ಟ್ ಆ್ಯಂಕರ್ : ರಕ್ಷತ್ ಶೆಟ್ಟಿ
- ಮೈಕ್ರೋಸೈಟ್ : NewsFirstLive
- ಸ್ಯಾಂಟ್ರೋ ರವಿ ಕೇಸ್
ಬರೋಬ್ಬರಿ ಐದು ‘ಸ್ವರ್ಣ’ ಪ್ರಶಸ್ತಿ
ಬೆಸ್ಟ್ ಕವರೇಜ್ ವಿಭಾಗದಲ್ಲಿ ಕುಂದಾಪುರ ಮೂಲದ ಚೈತ್ರಾ ಕೇಸ್ ವಿಸ್ತೃತ ವರದಿಗೆ ಚಿನ್ನದ ಪ್ರಶಸ್ತಿ ಬಂದಿದ್ದು, ನ್ಯೂಸ್ ಫಸ್ಟ್ ನ್ಯೂಸ್ ಕೋ-ಆರ್ಡಿನೇಟರ್ ಮೋಹನ್ ಕುಮಾರ್.ಕೆ.ಪಿ ಪ್ರಶಸ್ತಿ ಸ್ವೀಕರಿಸಿದರು. ಜೊತೆಗೆ ಬೆಸ್ಟ್ ಅರ್ಲಿ ಪ್ರೈಂ ಶೋ ವಿಭಾಗದಲ್ಲಿ ನ್ಯೂಸ್ ಫಸ್ಟ್ ನ ವಿಶೇಷ ಕಾರ್ಯಕ್ರಮ ‘ನಾನು ಮುಖ್ಯಮಂತ್ರಿ’ ಕಾರ್ಯಕ್ರಮಕ್ಕೆ ಪ್ರಶಸ್ತಿ ಬಂದಿದೆ. ಬೆಸ್ಟ್ ಲೇಟ್ ಪ್ರೈಂ ಟೈಂ ಶೋ ವಿಭಾಗದಲ್ಲಿ ಪ್ರತಿದಿನ ರಾತ್ರಿ 10 ಗಂಟೆಗೆ ಪ್ರಸಾರವಾಗುವ ‘ಬೆಂಗಳೂರು ಫಸ್ಟ್’ ಕಾರ್ಯಕ್ರಮಕ್ಕೆ ಚಿನ್ನದ ಪ್ರಶಸ್ತಿ ಬಂದಿದ್ದು, ಬಿಸಿನೆಸ್ ಹೆಡ್ ಎಸ್. ದಿವಾಕರ್ ಪ್ರಶಸ್ತಿ ಸ್ವೀಕರಿಸಿದರು. ಇನ್ನು, ಬೆಸ್ಟ್ ಆ್ಯಂಕರ್ ವಿಭಾಗದಲ್ಲಿ ವಿದ್ಯಾಶ್ರೀ ಉಜಿರೆಗೆ ಚಿನ್ನದ ಪ್ರಶಸ್ತಿ ಸಂದಿದೆ. ವಿದ್ಯಾಶ್ರೀ ಪರವಾಗಿ ನ್ಯೂಸ್ ಫಸ್ಟ್ ನ ಕ್ರಿಯೇಟಿವ್ ಹೆಡ್ ಹೆಚ್ಪಿ ಸಿದ್ದೇಶ್ಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ಹಾಗೆಯೇ ‘ಇಸ್ರೇಲ್ ವಾರ್ ಇಂಪ್ಯಾಕ್ಟ್ ಆನ್ ಕನ್ನಡಿಗಾಸ್’ ವಿಸ್ತೃತ ವರದಿಗೆ ಚಿನ್ನದ ಪ್ರಶಸ್ತಿ ಬಂದಿದ್ದು, ಅಸೋಸಿಯೇಟ್ ಎಡಿಟರ್ ಅನಂತ್ ಸಾಯಿ ಪ್ರಶಸ್ತಿ ಸ್ವೀಕರಿಸಿದರು.
ಪ್ರತಿಷ್ಠಿತ ENBA ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡ ನ್ಯೂಸ್ ಫಸ್ಟ್ ತಂಡಕ್ಕೆ ಸಂಸ್ಥೆಯ ಸಿಇಓ ಹಾಗೂ ಎಂಡಿ ರವಿಕುಮಾರ್ ಮತ್ತು ಪ್ರಧಾನ ಸಂಪಾದಕರಾದ ಎಸ್.ಎಚ್.ಮಾರುತಿ ಅವರು ಅಭಿನಂದಿಸಿದ್ದಾರೆ. ಸಂಸ್ಥೆಯ ಪ್ರತಿಯೊಬ್ಬರ ಶ್ರಮ, ಪರಿಶ್ರಮದ ಪರಿಣಾಮವೇ ನ್ಯೂಸ್ ಫಸ್ಟ್ ಸಂಸ್ಥೆಗೆ ಈ ವರ್ಷವೂ 12 ಪ್ರಶಸ್ತಿ ಲಭಿಸಲು ಕಾರಣವಾಗಿದೆ. ಮತ್ತಷ್ಟು ಕಾರ್ಯಕ್ರಮಗಳು , ನೇರ, ನಿಷ್ಠೂರ, ನೈಜ, ಜನಪರ, ಮಾನವೀಯ ಮೌಲ್ಯಗಳ ಸುದ್ದಿಗಳನ್ನ ಉಣಬಡಿಸುವ ಮೂಲಕ ಕರುನಾಡಿನ ಜನತೆಗೆ ಮತ್ತಷ್ಟು ಹತ್ತಿರವಾಗುತ್ತೇವೆ. ನಿಮ್ಮ ಹಾರೈಕೆ ಸದಾ ಹೀಗೆ ಇರಲಿ. ಈ ಹಂತಕ್ಕೆ ಜತೆಯಾದ ರಾಜ್ಯದ ಜನತೆಗೆ, ನ್ಯೂಸ್ ಫಸ್ಟ್ ವೀಕ್ಷಕರಿಗೆ ನಮನಗಳು ಎಂದು ಸಿಇಓ ರವಿಕುಮಾರ್ ಹಾಗು ಸಂಪಾದಕ ಎಸ್.ಎಚ್.ಮಾರುತಿ ತಿಳಿಸಿದ್ದಾರೆ.
Key words: News First, ENBA, awards