ಮೈಸೂರು,ಅಕ್ಟೋಬರ್,29,2020(www.justkannada.in) : ಪ್ರೊ.ರಾಜ್ ಮೋಹನ್ ಗಾಂಧಿ ಅವರ ವಿಚಾರಧಾರೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ‘’ಎಲ್ಲರ ಭಾರತ’’ ಕೃತಿ ಸಹಕಾರಿಯಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.
ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರ ಗಾಂಧಿ ಭವನ ಹಾಗೂ ಗಾಂಧಿ ವಿಚಾರ ಪರಿಷತ್ತು ವತಿಯಿಂದ ಮಾನಸಗಂಗೋತ್ರಿಯ ಗಾಂಧಿ ಭವನದಲ್ಲಿ ಗುರುವಾರ ನಡೆದ ಈ.ಧನಂಜಯ ಎಲಿಯೂರು ಅವರು ಕನ್ನಡಕ್ಕೆ ಅನುವಾದಿಸಿರುವ ಗಾಂಧೀಜಿ ಅವರ ಮೊಮ್ಮಗ ರಾಜಮೋಹನ್ ಗಾಂಧಿ ಅವರ ಭಾಷಣ ಸಂಗ್ರಹ ಕೃತಿಯಾದ ‘’ಎಲ್ಲರ ಭಾರತ’’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಾಮಾಜಿಕ ಸಮಾನತೆಯ ಆಶ್ರಯದಲ್ಲಿ ಕೃತಿಯನ್ನು ಹಿಡಿದಿಡಲಾಗಿದೆ
ರಾಜ್ ಮೋಹನ್ ಗಾಂಧಿ ಅವರ ಭಾಷಣಗಳನ್ನು ಸಮಗ್ರವಾಗಿ ಹಿಡಿದಿಡುವ ಪ್ರಯತ್ನವಾಗಿದೆ. ಇದು ಮುಂದಿನ ತಲೆಮಾರಿನ ಯುವಕರ ಅಧ್ಯಯನಕ್ಕೆ ಸಹಕಾರಿಯಾಗಿದೆ. ಸಾಮಾಜಿಕ ಸಮಾನತೆಯ ಆಶ್ರಯದಲ್ಲಿ ಕೃತಿಯನ್ನು ಹಿಡಿದಿಡಲಾಗಿದೆ ಎಂದರು.
50 ಪುಟಗಳನ್ನು ಹೊಂದಿದ್ದು, ಸರಳ ಮತ್ತು ನೇರವಾದ ಭಾಷೆಯಾಗಿದೆ
ಈ ಕೃತಿಯು 50 ಪುಟಗಳನ್ನು ಹೊಂದಿದ್ದು, ಸರಳ ಮತ್ತು ನೇರವಾದ ಭಾಷೆಯಾಗಿದೆ. ಓದಿಸಿಕೊಳ್ಳುವ ಗುಣವನ್ನು ಈ ಕೃತಿ ಹೊಂದಿದೆ. ಗಾಂಧೀಜಿ ಅವರ 150 ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ ಮೋಹನ್ ಗಾಂಧಿ ಮಾನಸಗಂಗೋತ್ರಿಯ ಗಾಂಧಿ ಭವನಕ್ಕೆ ಭೇಟಿ ನೀಡಿ ಮೆಚ್ಚುಗೆವ್ಯಕ್ತಪಡಿಸಿದ್ದರು ಎಂದು ನೆನೆದರು.
key words : next-generation-Raj Mohan Gandhi-work-helpful-deliver- ideas-Chancellor-Prof.G.Hemant Kumar