ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ: ಆ.23 ರಿಂದ ಶಾಲಾ-ಕಾಲೇಜು ಆರಂಭಕ್ಕೆ ನಿರ್ಧಾರ.

ಬೆಂಗಳೂರು,ಆಗಸ್ಟ್,6,2021(www.justkannada.in):  ರಾಜ್ಯದಲ್ಲಿ ಕೊರೋನಾ 3ನೇ ಅಲೆ ಭೀತಿ ಇತ್ತೀಚೆಗೆ ಕೊರೋನಾ ಏರುಗತಿಯಲ್ಲಿ ಸಾಗಲು ಆರಂಭಿಸಿದ್ದು ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.

ಇಂದು ಕೋವಿಡ್ ಟಫ್ ರೂಲ್ಸ್ ಜಾರಿ ಬಗ್ಗೆ ಅಧಿಕಾರಿಗಳ ಜತೆ ಸಭೆ ನಡೆಸಿ ಚರ್ಚಿಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ ಮಾಡಲು ನಿರ್ಧರಿಸಲಾಗಿದೆ. ರಾತ್ರಿ 9 ರಿಂದ ಬೆಳಿಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಇನ್ನು ಗಡಿ ಜಿಲ್ಲೆಗಳಲ್ಲಿ  ವೀಕೆಂಡ್ ಕರ್ಫ್ಯೂ ಜಾರಿಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಶಾಲಾ-ಕಾಲೇಜು ಆರಂಭ

ರಾಜ್ಯದಲ್ಲಿ ಎರಡು ಹಂತಗಳಲ್ಲಿ ಶಾಲಾಕಾಲೇಜುಗಳನ್ನ ಆರಂಭಿಸಲು ನಿರ್ಧಾರ ಮಾಡಲಾಗಿದೆ. ಮೊದಲ ಹಂತದಲ್ಲಿ ಆಗಸ್ಟ್ 23 ರಿಂದ 9,10,11,12ನೇ ತರಗತಿಯನ್ನ ಆರಂಭಿಸಲಾಗುತ್ತದೆ. ಬ್ಯಾಚ್ ವೈಸ್ ತರಗತಿ ನಡೆಸಲಾಗುತ್ತದೆ. ಪ್ರಾಥಮಿಕ ಶಾಲೆ ಆರಂಭದ ಬಗ್ಗೆ ತಜ್ಞರ ಸಮಿತಿ ಜತೆ ಚರ್ಚಿಸಿ ನಿರ್ಧಾರ ಮಾಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ENGLISH SUMMARY….

Night curfew imposed in state: Schools-colleges to commence from August 23
Bengaluru, August 6, 2021 (www.justkannada.in): The fear of the possible COVID 3rd wave has intensified, forcing the State Government to announce a night curfew in the State.
Speaking to the media persons today after participating in the expert committee meeting about the need of introducing tough rules, he informed that night curfew will be enforced across the state from today. Accordingly, the curfew will be in force from 9.00 pm to 5 pm. It is also decided to impose a weekend curfew in the border districts of the state, he said.
School-Colleges to start
The State Government has decided to commence the schools and colleges in the State in two phases. 9, 10, 11, and 12th standards will start from August 23 and the classes will be held in batches. “Decision about the commencement of primary school will be made after discussing with the experts,” the Chief Minister informed.
Keywords: Chief Minister Basavaraj Bommai/ night curfew/ School-colleges/ August 23

Key words:  night curfew –enforcement- Decision – school-college- start –CM-Basavaraj bommai