ಬೆಂಗಳೂರು,ಡಿಸೆಂಬರ್,30,2020(www.justkannada.in): ನೈಟ್ ಕರ್ಫ್ಯೂ ಈಗ ಮುಗಿದ ಅಧ್ಯಾಯ. ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲ್ಲ. ಹೊಸ ವರ್ಷಾಚರಣೆಗೆ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂಧು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸುಧಾಕರ್, ಬ್ರಿಟನ್ ನಿಂದ ಬಂದ 107 ಮಂದಿಗೆ ಕೊರೋನಾ ವೈರಸ್ ಪತ್ತೆಯಾಗಿದೆ. ದೇಶದಲ್ಲಿ 20 ಮಂದಿಗೆ ಹೊಸ ರೂಪಾಂತರಿ ಕೊರೋನಾ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ 7 ಮಂದಿಗೆ ಈ ವೈರಸ್ ಪತ್ತೆಯಾಗಿದೆ ಎಂದು ತಿಳಿಸಿದರು.
1614 ಜನರ ಕೊರೋನಾ ಪರೀಕ್ಷೆಯಾಗಿದೆ. 26 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಇನ್ನು ಬೆಂಗಳೂರಿನ ಮೂವರಿಗೆ ಶಿವಮೊಗ್ಗದ ನಾಲ್ವರಿಗೆ ಹೊಸ ಕೊರೋನಾ ರೂಪಾಂತರ ಪತ್ತೆಯಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.
Key words: night curfew – now over-Minister -Sudhakar -clarified.