ಬೆಂಗಳೂರು,ಡಿಸೆಂಬರ್,24,2020(www.justkannada.in): ರಾತ್ರಿ ವೇಳೆ ಅನಗತ್ಯ ಓಡಾಟ, ಪಾರ್ಟಿ ಮಾಡೋದು ತಪ್ಪಿಸಲು ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಆದರೇ ಏನೇ ಮಾಡಿದರೂ ತಪ್ಪು ಎನ್ನುವಂತೆ ಆಡುತ್ತಾರೆ. ಕೊರೋನಾ ನಿಯಂತ್ರಣಕ್ಕೆ ಸಹಕಾರ ನೀಡುತ್ತೇವೆ ಎನ್ನುತ್ತಾರೆ. ಆದರೆ ವಿರೋಧ ಪಕ್ಷದವರು ಯಾವತ್ತೂ ಸಹಕಾರ ನೀಡಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಕಿಡಿಕಾರಿದರು.
ಬೆಂಗಳೂರಿನಲ್ಲಿ ಮಾತನಾಡಿ ನೈಟ್ ಕರ್ಫ್ಯೂ ಸಮರ್ಥಿಸಿಕೊಂಡ ಸಚಿವ ಸುಧಾಕರ್, ರಾತ್ರಿ 8 ಗಂಟೆಗೆ ನೈಟ್ ಕರ್ಫ್ಯೂ ಸಲಹೆ ಬಂದಿತ್ತು. ನೈಟ್ ಕರ್ಫ್ಯೂ ಜಾರಿಯಿಂದ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ಸೋಂಕು ಹರಡುವುದನ್ನ ತಪ್ಪಿಸಬಹುದು. ಹೀಗಾಗಿ ಅನಗತ್ಯ ಓಡಾಟ, ಪಾರ್ಟಿಗೆ ಬ್ರೇಕ್ ಹಾಕಲು ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಸಿಎಂ ವಿವೇಚನೆಯಿಂದ ತೆಗೆದುಕೊಂಡ ನಿರ್ಧಾರ ಎಂದರು.
ವಿರೋಧ ಪಕ್ಷಗಳು ಯಾವತ್ತು ವಿರೋಧ ಮಾಡಿಲ್ಲ..? ಕೊರೋನಾ ನಿಯಂತ್ರಿಸೋದು ತಪ್ಪು ನಿಯಂತ್ರಣ ಮಾಡದೇ ಇರೋದು ತಪ್ಪು. ಏನೇ ಮಾಡಿದರೂ ಮಾಡಿದರೂ ತಪ್ಪು ಎನ್ನುವಂತೆ ಆಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ನೈಟ್ ಕರ್ಫ್ಯೂಗೆ ಸಿದ್ದತೆ ಮಾಡಿಕೊಳ್ಳಲು ವ್ಯಾಪಾರಿಗಳು ಒಂದು ದಿನ ಟೈಮ್ ನೀಡುವಂತೆ ಮನವಿ ಮಾಡಿದ್ದರು. ಹೀಗಾಗಿ ನಿನ್ನೆ ಬದಲು ಇಂದಿನಿಂದ ನೈಟ್ ಕರ್ಫ್ಯೂ ಜಾರಿ ಬರುತ್ತದೆ ಎಂದು ಸಚಿವ ಸುಧಾಕರ್ ಸ್ಪಷ್ಟನೆ ನೀಡಿದರು.
English summary….
Is it wrong to restrict unnecessary roaming, parties? Minister Sudhakar questions opposition
Bengaluru, Dec. 24, 2020 (www.justkannada.in): “The night curfew is imposed to restrict unnecessary roaming and doing parties. But the opposition and a few people say whatever does is wrong. They say that they will cooperate to control Corona. But they never cooperated with us,” said Health and Medical Education Minister Sudhakar.
Speaking in Bengaluru today, Minister Sudhakar defended the State Government’s decision to impose a night curfew. “We were suggested to impose a curfew from 8 pm. Spreading of Corona can be prevented to a great extent by closing bars and restaurants through the night curfew. Hence, we have imposed it to restrict unnecessary roaming and partying. It is a decision taken by the Chief Minister with thinking a lot,” he added. He also clarified, “even businessmen and traders had also requested to keep in mind that their livelihood is not disturbed.”
Keywords: Minister K. Sudhakar/ Night curfew/ State Government/
Key words: night curfew – suggested – 8pm-Unnecessary Travel- Party-Minister -Sudhakar