ನಾಳೆಯಿಂದ ನೈಟ್ ಕರ್ಫ್ಯೂ; ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ…

ಬೆಂಗಳೂರು,ಏಪ್ರಿಲ್,9,2021(www.justkannada.in):  ರಾಜ್ಯದಲ್ಲಿ ಕೊರೋನಾ 2ನೇ ಅಲೆ ಅಬ್ಬರಿಸುತ್ತಿರುವ ಹಿನ್ನೆಲೆ ಕೊರೋನಾ ತಡೆಗಾಗಿ ರಾಜ್ಯ ಸರ್ಕಾರ ನಾಳೆಯಿಂದ 8 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿದ್ದು ಇದಕ್ಕಾಗಿ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದೆ.

ರಾಜ್ಯದಲ್ಲಿ ಕೋವಿಡ್-19 ಸೋಂಕು ಹರಡುವಿಕೆ ಉಲ್ಬಣವಾಗಿದ್ದು ನಿಯಂತ್ರಣಕ್ಕಾಗಿ ರಾಜ್ಯಸರ್ಕಾರ ಕೆಲ ಜಿಲ್ಲೆಗಳಲ್ಲಿ ನೈಟ್ ಕರ್ಪ್ಯೂ ನಿಯಮ ಜಾರಿಗೊಳಿಸಿದೆ‌. ವಿಪತ್ತು ನಿರ್ವಹಣಾ ಕಾಯ್ದೆ, 2005 ರಲ್ಲಿನ ಸೆಕ್ಷನ್ 24ರ ಅನ್ವಯ ಬೆಂಗಳೂರು ನಗರ, ಮೈಸೂರು, ಮಂಗಳೂರು, ಉಡುಪಿ ಮಣಿಪಾಲ್, ಬೀದರ್, ಕಲಬುರಗಿ ಮತ್ತು ತುಮಕೂರು ನಗರಗಳಲ್ಲಿ ದಿನಾಂಕ:10/04/2021ರಿಂದ 20.04.2021ರ ವರೆಗೆ (ಎರಡು ದಿನಗಳನ್ನು ಒಳಗೊಂಡಂತೆ) “ಕೊರೊನಾ ಕರ್ಪ್ಯೂವನ್ನು ರಾತ್ರಿ 10.00 ಗಂಟೆಯಿಂದ ಬೆಳಗ್ಗೆ 5.00 ಗಂಟೆಯವರೆಗೆ ಜಾರಿಗೊಳಿಸಲಾಗಿದೆ.

ನೈಟ್ ಕರ್ಫ್ಯೂಗೆ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನ ಪ್ರಕಟಿಸಿದ್ದು ಈ ಕೆಳಕಂಡಂತಿದೆ….

ಕೊರೊನಾ ಕರ್ಪ್ಯೂ ಸಂದರ್ಭದಲ್ಲಿ ಕೆಲವು ಅತ್ಯವಶ್ಯಕ ಸೇವೆಗಳಿಗೆ ಮಾತ್ರ ಅನುಮತಿ‌ ನೀಡಲಾಗಿದೆ. ಉಳಿದಂತೆ ಎಲ್ಲಾ ಸೇವೆಗಳನ್ನು / ಸಂಚಾರಗಳನ್ನು ನಿಷೇಧಿಸಲಾಗಿದೆ.

ವಿವಿಧ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮತ್ತು ಅವರ ಸಹಾಯಕರಿಗೆ ವೈದ್ಯಕೀಯ ಸೇವೆಗಾಗಿ ಸಂಚಾರಕ್ಕೆ ಅನುಮತಿಸಿದೆ.

ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವಂತಹ ಎಲ್ಲಾ ಕಾರ್ಖಾನೆಗಳು / ಕಂಪನಿಗಳು  ಸಂಸ್ಥೆಗಳು ಯಥಾ ರೀತಿ ಕಾರ್ಯ ನಿರ್ವಹಿಸಲು ಅನುಮತಿಸಿದೆ. ಆದರೆ, ಸಂಬಂಧಿಸಿದ ಕಾರ್ಮಿಕರು, ನೌಕರರು ಕೊರೊನಾ ಕರ್ಪ್ಯೂ ಅವಧಿಗೆ ಮುನ್ನವೇ ಕರ್ತವ್ಯದಲ್ಲಿ ಹಾಜರಿರಬೇಕು.

ವೈದ್ಯಕೀಯ ಸೇವೆ, ತುರ್ತು ಚಟುವಟಿಕೆಗೆ ಅನುಮತಿ ನೀಡಲಾಗಿದೆ. ಉಳಿದಂತೆ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ.

ಅತ್ಯವಶ್ಯಕ ಸೇವೆಗಳನ್ನು ಒದಗಿಸುವಂತಹ ವಾಹನಗಳು / ಸರಕು ಸಾಗಾಣಿಕೆ ವಾಹನಗಳು / Home Delivery / E-Commerce ಮತ್ತು ಖಾಲಿ ವಾಹನಗಳ ಸಂಚಾರಕ್ಕೆ ಅನುಮತಿ.

ರಾತ್ರಿ ವೇಳೆಯಲ್ಲಿನ ಬಸ್ಸು, ರೈಲು ಹಾಗೂ ವಿಮಾನದ ದೂರ ಪ್ರಯಾಣಕ್ಕೆ ಅವಕಾಶ. ಪ್ರಯಾಣಿಕರು ಮನೆಯಿಂದ ನಿಲ್ಯಾಣಗಳಿಗೆ ಮತ್ತು ನಿಲ್ಯಾಣಗಳಿಂದ ಮನೆಗೆ ಅಧಿಕೃತ ಟಿಕೆಟ್ ಜೊತೆಗೆ ಸಂಚರಿಸಬಹುದು.Night curfew – tomorrow- Guidelines - State Government

ಲೋಪವೆಸಗುವಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51 ರಿಂದ 60 ಹಾಗೂ ಭಾರತೀಯ ದಂಡ ಸಂಹಿತೆ ಹಾಗೂ ಅನ್ವಯವಾಗಬಹುದಾದ ಇತರ ಕಾನೂನು ಉಪಬಂಧಗಳ ಅನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ENGLISH SUMMARY…..

Night curfew from tomorrow: State Govt. issues guidelines
Bengaluru, Apr.9, 2021 (www.justkannada.in): To stop the intensification of the 2nd wave of COVID-19 Pandemic, the State Government has imposed a night curfew in 8 districts of the state and has issued guidelines.Night curfew – tomorrow- Guidelines - State Government
As the 2nd wave of COVID-19 Pandemic is taking its grip across the state, initiating control measures has become inevitable. As a result of this night, curfew has been imposed in 8 districts, as per Sec. 24 of the Disaster Management Act, 2005. The 8 districts where night curfew will be in force are Bengaluru City, Mysuru, Mangaluru, Udupi, Manipal, Bidar, Kalaburagi, and Tumakuru. The night curfew will be from April 10 to 20, 2021, from 10.00 pm to 5.00 am.
The guidelines are as follows:
• Only essential services will be allowed to function during night curfew hours and all other services and traffic will be prohibited.
• People suffering from various ailments and health problems along with one assistant will be allowed to commute to get medical treatment.
• All factories/ companies which work night shifts are allowed. But the employees should reach the offices within 10.00 pm.
• Medical services and emergency activities are allowed and all other commercial activities are prohibited.
• Vehicles carrying essential goods/ services/ home delivery/ e-commerce and empty vehicles will be allowed.
• Movement of long-distance passenger buses, trains, and airplanes is allowed. Passengers should commute along with valid tickets.
• Anybody who violates the guidelines will have to face action as per Sec. 51 to 60 of the Disaster Management Act, 2005 and Indian Penal Code, and other applicable laws.
Keywords: COVID-19 Pandemic/ Night Curfew/ 10 pm to 5 pm/ State Govt. guidelines

Key words: Night curfew – tomorrow- Guidelines – State Government