ಮೈಸೂರು,ಡಿಸೆಂಬರ್,24,2020(www.justkannada.in) : ನೈಟ್ ಕರ್ಪ್ಯೂ ಏಕೆ ಮಾಡಿದ್ದಾರೆಂದು ಅವರಿಗೆ ಗೊತ್ತಿಲ್ಲ. ಸಿಎಂ ಯಡಿಯೂರಪ್ಪಗೆ ಒಳ್ಳೆಯ ಸಲಹೆಗಾರರು ಇಲ್ಲ ಎಂದು ಸರ್ಕಾರವನ್ನು ವಾಟಾಳ್ ನಾಗರಾಜ್ ಟೀಕಿಸಿದ್ದಾರೆ.
ಕೊರೊನಾ ರೂಪಾಂತರ ವೈರಸ್ ಆತಂಕದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರಾತ್ರಿ 11ರಿಂದ ಬೆಳಗ್ಗೆ 5 ರವರೆಗೆ ನೈಟ್ ಕರ್ಪ್ಯೂ ಇರಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಣೆಗೆ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್ ವಿರೋಧ ವ್ಯಕ್ತಪಡಿಸಿದ್ದಾರೆ.
ಅವಿವೇಕದ ನೈಟ್ ಕರ್ಪ್ಯೂ ಬೇಡ
ಸರ್ಕಾರ ಜ.1ರವರೆಗೆ ಕರ್ಪ್ಯೂ ಜಾರಿ ಮಾಡಿದೆ. ನೈಟ್ ಕರ್ಪ್ಯೂ ಏಕೆ ಮಾಡಿದ್ದಾರೆಂದು ಅವರಿಗೇ ಗೊತ್ತಿಲ್ಲ. ಸಿಎಂ ಯಡಿಯೂರಪ್ಪಗೆ ಒಳ್ಳೆಯ ಸಲಹೆಗಾರರು ಇಲ್ಲ. ಹದಗೆಟ್ಟ ಅವಿವೇಕದ ನೈಟ್ ಕರ್ಪ್ಯೂ ಬೇಡ.
ಇಂತಹ ಕರ್ಪ್ಯೂ ಜನರಿಗೆ ಭಯವನ್ನು ಹುಟ್ಟಿಸುತ್ತಿದೆ. ಇದು ಕಾಮಿಡಿ ಕರ್ಪ್ಯೂ. ಸರ್ಕಾರದ ಹುಚ್ಚು ದರ್ಬಾರ್ ಎಂದು ಸರ್ಕಾರದ ವಿರುದ್ದ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.
key words : Night-curfew-Why-Don’t know-Vatal Nagaraj- Criticism