ಬೆಂಗಳೂರು, ಜೂನ್ 15, 2020 (www.justkannada.in): ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಕೊಡಗಿನ ಮಳೆಯ ಜೊತೆ ಹೆಜ್ಜೆ ಹಾಕುತ್ತಿದ್ದಾರೆ!
ಹೌದು. ನವ ದಂಪತಿ ತಮ್ಮ ಏಕಾಂತದ ವೇಳೆಯ ಖುಷಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದೆ.
ಪತ್ನಿ ಜತೆಗೆ ತೋಟದ ಮನೆಯಲ್ಲಿ ಕೈ ಕೈ ಹಿಡಿದು ಹೆಜ್ಜೆ ಹಾಕುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದ ನಿಖಿಲ್ ಇದೀಗ ಮಳೆಯಲಿ ಕೊಡೆ ಹಿಡಿದು ಪತ್ನಿ ಜತೆಗಿರುವ ರೊಮ್ಯಾಂಟಿಕ್ ಕ್ಷಣವೊಂದನ್ನು ಹಂಚಿಕೊಂಡಿದ್ದಾರೆ.
ಈ ಫೋಟೋಗೆ ಮಳೆಯಲಿ, ಜೊತೆಯಲಿ ಎಂದು ಕ್ಯಾಪ್ಷನ್ ಕೂಡಾ ಕೊಟ್ಟಿದ್ದಾರೆ. ನಿಖಿಲ್-ರೇವತಿ ಜೋಡಿಯ ಈ ಮುದ್ದಾದ ಫೋಟೋಗೆ ಈಗ ಸಾವಿರಾರು ಲೈಕ್ಸ್ ಬಂದಿವೆ.