ನವದೆಹಲಿ, ಜ.9,2020(www.justkannada.in): ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ನಿರ್ಭಯಾ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ವಿನಯ್ ಕುಮಾರ್ ಶರ್ಮಾ ನೇಣು ಕುಣಿಕೆಯಿಂದ ಪಾರಾಗುವ ಕಟ್ಟಕಡೆಯ ಯತ್ನವಾಗಿ ಇಂದು ಸುಪ್ರೀಂಕೋರ್ಟ್ಗೆ ಕ್ಯೂರೇಟಿವ್ ಅರ್ಜಿ ಸಲ್ಲಿಸಿದ್ದಾನೆ.
ವಿನಯ್ ಕುಮಾರ್ ಪರ ವಕೀಲರು ಇಂದು ಸುಪ್ರೀಂಕೋರ್ಟ್ ಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿದ್ದು, ಶೀಘ್ರ ವಿಚಾರಣೆ ನಡೆಸಲಿದೆ.
ನಿರ್ಭಯ ಮೇಲೆ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಅಪರಾಧಿಗಳಾದ ಮುಕೇಶ್ಸಿಂಗ್, ಪವನ್ಗುಪ್ತ, ವಿನಯ್ಕುಮಾರ್ ಶಮಾ ಹಾಗೂ ಅಕ್ಷಯ್ಕುಮಾರ್ ಸಿಂಗ್ ಗೆ ಗಲ್ಲುಶಿಕ್ಷೆ ವಿಧಿಸಿದ್ದು ಜ.22ರಂದು ಬೆಳಗ್ಗೆ 7 ಗಂಟೆಗೆ ನೇಣಿಗೇರಿಸುವಂತೆ ದೆಹಲಿಯ ಪಟಿಯಾಲ ಕೋರ್ಟ್ ಆದೇಶ ಹೊರಡಿಸಿದೆ. ಈ ಸಂಬಂಧ ಡೆತ್ವಾರೆಂಟ್ ಹೊರಡಿಸಿದೆ.
Key words: Nirbhaya -gang rape- murder case-filing – curative application – Supreme Court.