ನವದೆಹಲಿ,ಡಿ,18,2019(www.justkannada.in): ನಿರ್ಭಯಾ ಗ್ಯಾಂಗ್ ರೇಪ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲ್ಲುಶಿಕ್ಷೆ ತೀರ್ಪು ಮರುಪರಿಶೀಲಿಸುವಂತೆ ಅಪರಾಧಿ ಅಕ್ಷಯ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ಮಧ್ಯಾಹ್ನ 1ಗಂಟೆಗೆ ತೀರ್ಪು ಕಾಯ್ದಿರಿಸಿದೆ.
ಇಂದು ಸುಪ್ರೀಂಕೋರ್ಟ್ ನಲ್ಲಿ ಗಲ್ಲುಶಿಕ್ಷೆ ತೀರ್ಪು ಮರುಪರಿಶೀಲಿಸುವಂತೆ ಅಪರಾಧಿ ಅಕ್ಷಯ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಅಪರಾಧಿ ಅಕ್ಷಯ್ ಪರ ವಾದ ಮಂಡಿಸಿದ ವಕೀಲ ಎಪಿ ಸಿಂಗ್, ಅಪರಾಧಿ ವಿರುದ್ದ ಯಾವುದೇ ಪುರಾವೆ ಇಲ್ಲ. ನಿರ್ಭಯಾ ಸ್ನೇಹಿತರನ್ನ ಖರೀದಿಸಿ ಸುಳ್ಳುಸಾಕ್ಷಿ ಹೇಳಿಸಿದ್ದಾರೆ. ಪ್ರಕರಣದಲ್ಲಿ ಮೊದಲಿಗೆ ಅಕ್ಷಯ್ ಕುಮಾರ್ ಹೆಸರಿರಲಿಲ್ಲ. ವಿಪಿನ್ ವಶಕ್ಕೆ ಪಡೆದ ಮೇಲೆ ಅಕ್ಷಯ್ ಹೆಸರು ಸೇರಿಸಲಾಯಿತು ಎಂದು ವಾದ ಮಂಡಿಸಿದರು.
ಗಲ್ಲುಶಿಕ್ಷೆಯನ್ನೇ ಕೊಡಬೇಕು ಎಂಬುದಿಲ್ಲ. ಗಾಂಧಿ ಹೇಳಿದ್ದಾರೆ ಶಿಕ್ಷೆ ಕೊಡುವಾಗ ಬಡವರ ದುರ್ಬಲರ ಮೇಲೆ ಕರುಣೆ ತೋರಿಸಿ ಎಂದು. ಬದುಕಿ ಬದುಕಲು ಬಿಡಿ ಎಂಬುದು ಹಿಂದೂಧರ್ಮದ ಧ್ಯೆಯ. ನೀವು ಅಪರಾಧಿಯನ್ನ ಕೊಲ್ಲಬಹುದು. ಅಪರಾಧವನ್ನಲ್ಲ. ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾಗಿದೆ. ಇನ್ನು ಗಲ್ಲು ಶಿಕ್ಷೆಯಾಕೆ…? ಅಯಸ್ಸು ಕ್ಷೀಣಿಸುತ್ತಿರುವಾಗ ಗಲ್ಲು ಶಿಕ್ಷೆ ಯಾಕೆ ಎಂದು ಪ್ರಶ್ನಿಸಿದರು.
ಭಾರತ ಜೀವಹಾನಿ ಕೊಲ್ಲುವುದನ್ನ ಒಪ್ಪುವುದಿಲ್ಲ. ಕಾನೂನು ಮತ್ತು ಮನುಷ್ಯತ್ವ ಎಂಬ ಎರಡು ರೀತಿಯ ವಾದವಿದೆ. ಕಾನೂನಿನ ಮೂಲಕ ಅಪರಾಧಿ ಶಿಕ್ಷಿಸಬಹುದು. ನೈತಿಕ ಧಾರಿ ಮೂಲಕ ಅಪರಾಧ ತಡೆಗಟ್ಟಬಹುದು. ಹಿಂದೆ 100 ವರ್ಷ ಬದುಕುತ್ತಿದ್ದರು. ಈಗ 50ರಿಂದ 60 ವರ್ಷ ಬದುಕುವುದೇ ಹೆಚ್ಚು. ಗಲ್ಲುಶಿಕ್ಷೆ ಎಲ್ಲದಕ್ಕೂ ಪರಿಹಾರವಲ್ಲ. ಅವರ ಕುಟುಂಬಕ್ಕೆ ಯಾರು ಜವಾಬ್ದಾರಿ. ಗಲ್ಲುಶಿಕ್ಷೆಯಿಂದ ಏನು ಸಾಧಿಸಬಹುದು ರಾಜೀವ್ ಗಾಂಧಿ ಹಂತಕರಿಗೆ ಗಲ್ಲುಶಿಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ಗಲ್ಲುಶಿಕ್ಷೆಯನ್ನೇ ನೀಡಬೇಕು ಎಂಬುದಿಲ್ಲ ಎಪಿ ಸಿಂಗ್ ವಾದ ಮಂಡಿಸಿದರು.
ಬಳಿಕ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕರುಣೆ ತೋರಲು ಅಪರಾಧಿಗಳು ಅರ್ಹರಲ್ಲ. ಈ ಪ್ರಕರಣ ಗಲ್ಲುಶಿಕ್ಷೆಗೆ ಅರ್ಹವಾದದ್ದು. ಗಲ್ಲುಶಿಕ್ಷೆಯನ್ನೇ ನೀಡಬೇಕು ಎಂದು ವಾದಿಸಿದರು. ವಿಚಾರಣೆ ಮುಕ್ತಾಯವಾದ ಬಳಿಕ ತೀರ್ಪನ್ನ ಇಂದು ಮಧ್ಯಾಹ್ನ 1 ಗಂಟೆಗೆ ಸುಪ್ರೀಂಕೋರ್ಟ್ ಕಾಯ್ದಿರಿಸಿದೆ.
Key words: Nirbhaya gang rape -murder case-suprme court-Judgment- 1 p.m.