ನವದೆಹಲಿ,ಜ,7,2020(www.justkannada.in): ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ನಾಲ್ವರು ಅಪರಾಧಿಗಳಿಗೆ ಜನವರಿ 22 ರಂದು ಗಲ್ಲಿಗೇರಿಸಲು ಆದೇಶಿಸಿದ್ದು ಕೋರ್ಟ್ ತೀರ್ಪಿಗೆ ನಿರ್ಭಯಾ ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ.
ಪಟಿಯಾಲ ಹೌಸ್ ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ಭಯಾ ತಾಯಿ, ಇದು ಭಾರತದ ಗೆಲುವು. ಭಾರತದ ಕಾನೂನಿನ ಮೇಲೆ ನಂಬಿಕೆ ಹೆಚ್ಚಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇದು ಭಾರತದ ಮಹಿಳೆಯರ ಗೆಲುವು. ಈ ತೀರ್ಪಿಗಾಗಿ ಸತತ ಏಳು ವರ್ಷಗಳಿಂದ ಕಾಯುತ್ತಿದ್ದೆವು. ಇದು ಭಾರತದ ಮಹಿಳೆಯರ ಗೆಲುವು. ಇಡೀ ಭಾರತಕ್ಕೆ ಗೆಲುವು ಸಿಕ್ಕಿದೆ. ನಮಗೆ ಕಾನೂನು ಹಾಗೂ ನ್ಯಾಯದ ಮೇಲೆ ನಂಬಿಕೆ ಇತ್ತು. ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯಿಂದ ದುಷ್ಟರು ಹೆದರುತ್ತಾರೆ ಎಂದು ನಿರ್ಭಯಾ ತಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ನಾಲ್ವರು ಅಪರಾಧಿಗಳಾದ ಪವನ್, ವಿನಯ್, ಅಕ್ಷಯ್ ಹಾಗೂ ಮುಖೇಶ್ಗೆ ಜನವರಿ 22 ಬೆಳಿಗ್ಗೆ 7 ಗಂಟೆಗೆ ಗಲ್ಲಿಗೇರಿಸುವಂತೆ ಪಟಿಯಾಲ ಹೌಸ್ ಕೋರ್ಟ್ ಆದೇಶ ನೀಡಿ ನಾಲ್ವರು ಅಪರಾಧಿಗಳಿಗೂ ಡೆತ್ ವಾರಂಟ್ ಜಾರಿ ಮಾಡಿದೆ.
Key words: nirbhaya-gangrape case-nirbhaya’s mother -Patiala House Court – Judgment