ನವದೆಹಲಿ,ಡಿ,18,2019(www.justkannada.in): ನಿರ್ಭಯಾ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲ್ಲುಶಿಕ್ಷೆ ತೀರ್ಪು ಮರುಪರಿಶೀಲನೆಗಾಗಿ ಅಪರಾಧಿ ಅಕ್ಷಯ್ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಆರ್ ಭಾನುಮತಿ ಮತ್ತು ನ್ಯಾ.ಅಶೋಕ್ ಭೂಷಣ್ ಹಾಗೂ ನ್ಯಾ.ಬೋಪಣ್ಣ ಅವರಿದ್ದ ಪೀಠ ಅಪರಾಧಿಗಳಿಗೆ ಗಲ್ಲುಶಿಕ್ಷೆ ಖಾಯಂಗೊಳಿಸಿದೆ. ಈ ಮೂಲಕ ಪ್ರಕರಣದ ನಾಲ್ವರು ಆರೋಪಿಗಳಿಗೂ ಗಲ್ಲುಶಿಕ್ಷೆ ಫಿಕ್ಸ್ ಆಗಿದೆ. ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಮೂರ್ತಿಗಳು ಅಕ್ಷಯ್ ವಾದಕ್ಕೆ ಮನ್ನಣೆ ಕೊಡಲು ಸಾಧ್ಯವಿಲ್ಲ. ತನಿಖೆ ಸರಿಯಾಗಿ ನಡೆದಿಲ್ಲ ಎನ್ನುವುದನ್ನ ಕೆಳನ್ಯಾಯಾಲಯ, ಹೈಕೋರ್ಟ್, ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಕೇಸ್ ತನಿಖೆ ವಿಚಾರಣೆಯಲ್ಲಿ ಲೋಪಗಳಿಲ್ಲ. ಹೀಗಾಗಿ ಮರುಪರಿಶೀಲನೆ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಗಲ್ಲುಶಿಕ್ಷೆ ತೀರ್ಪು ಮರುಪರಿಶೀಲಿಸುವಂತೆ ಕೋರಿ ಅಪರಾಧಿ ಅಕ್ಷಯ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯಿಂದ ನಿನ್ನೆ ಸಿಜೆಐ ಬೊಬ್ಡೆ ಅವರು ಹಿಂದೆ ಸರಿದಿದ್ದರು ಹೀಗಾಗಿ ಇಂದು ಆರ್ ಭಾನುಮತಿ ನೇತೃತ್ವದಲ್ಲಿ ತ್ರಿಸದಸ್ಯಪೀಠ ರಚಿಸಲಾಗಿತ್ತು. ಅಪರಾಧಿ ಪರ ಎಪಿ ಸಿಂಗ್ ವಾದ ಮಂಡಿಸಿದ್ದರು. ವಾದ ಪ್ರತಿವಾದ ಆಲಿಸಿದ ತ್ರಿಸದಸ್ಯಪೀಠ ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಗಲ್ಲುಶಿಕ್ಷೆ ಖಾಯಂಗೊಳಿಸಿದೆ.
Key words: Nirbhaya rape- murder case -guilty -plea – dismissed-Supreme Court