ನವದೆಹಲಿ, ಡಿಸೆಂಬರ್ 20, 2020 (www.justkannada.in): ಶಾಲೆಗಳು ಪುನರಾರಂಭವಾದರೂ ಹಿಂದಿನಂತೆಯೇ ಮಕ್ಕಳಿಗೆ ಬಿಸಿಯೂಟ ಇರುವುದಿಲ್ಲ ಎನ್ನಲಾಗಿದೆ.
ಬಿಸಿಯೂಟ ಬದಲಿಗೆ ಮಕ್ಕಳೇ ಸ್ವತಃ ಊಟವನ್ನು ತರುವಂತೆ ಸೂಚಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಬಿಸಿಯೂಟ ಬದಲಿಗೆ ರೇಷನ್ ಕಿಟ್ಸ್ ಗಳ ನೀಡುವ ಕಾರ್ಯಕ್ರಮವನ್ನು ಮುಂದುವರೆಸಲು ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಚಿವ ಸುರೇಶ್ ಕುಮಾರ್, ಕೆಲ ವಾರಗಳ ಹಿಂದೆಯೇ ರಾಜ್ಯ ಸರ್ಕಾರ ಬಿಸಿಯೂಟ ಕುರಿತು ಹೈಕೋರ್ಟ್’ಗೆ ಮಾಹಿತಿ ನೀಡಿತ್ತು. ಮಕ್ಕಳ ಮನೆಗಳಿಗೆ ಸರ್ಕಾರ ನೇರವಾಗಿ ರೇಷನ್ ಕಿಟ್ ಗಳನ್ನು ತಲುಪಿಸುತ್ತಿದೆ. ಅದನ್ನೇ ಮುಂದುವರಿಸಲಾಗುವುದು ಎಂದಿದ್ದಾರೆ.