ಬೆಂಗಳೂರು,ಜನವರಿ,1,2021(www.justkannada.in): ಇಂದಿನಿಂದ ಶಾಲಾ ಕಾಲೇಜು ಆರಂಭವಾಗಿದ್ದು ಪೋಷಕರಲ್ಲಿ ಆತಂಕ ಬೇಡ. ಧೈರ್ಯವಾಗಿ ಮಕ್ಕಳನ್ನ ಶಾಲೆಗೆ ಕಳುಹಿಸಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಇಂದು ಶಾಲಾ-ಕಾಲೇಜು, ವಿದ್ಯಾಗಮ ಆರಂಭ ಹಿನ್ನೆಲೆ, ಬೆಂಗಳೂರಿನ ವಿವಿಧ ಶಾಲೆಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಶಾಲೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲಿಸಿದರು.
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಆನ್ ಲೈನ್ ಕ್ಲಾಸ್ ಕೇವಲ ಪರ್ಯಾಯ ವ್ಯವಸ್ಥೆ. ಮಕ್ಕಳು ಶಾಲೆಗೆ ಬಂದರೆ ಮಾತ್ರ ಕಲಿಕೆ ಪರಿಪೂರ್ಣ. ಶಾಲೆಗೆ ಬರುವಂತೆ ಒತ್ತಡ ಹಾಕಿಲ್ಲ. ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಸೋಂಕು ಹರಡಬಾರದು ಹೀಗಾಗಿ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಇದು ಶಾಲೆಯಲ್ಲ, ಸುರಕ್ಷತಾ ಕೇಂದ್ರ ಎಂದು ನುಡಿದರು.
ಪೋಷಕರು ಇನ್ನು ಆತಂಕದಲ್ಲಿದ್ದಾರೆ. ಆತಂಕ ಬೇಡ. ಹೊಸ ಪ್ರಬೇಧದ ಕೊರೋನಾ ಹಳೆ ಕೊರೋನಾದಂತೆ. ವೇಗವಾಗಿ ಹರಡುತ್ತೆ ಅಷ್ಟೆ. ಇಂದು ಹೊಸ ವರ್ಷ ಹಿನ್ನೆಲೆ ಸೋಮವಾರದಿಂದ ಹೆಚ್ಚಿನ ಮಕ್ಕಳು ಶಾಲೆಗೆ ಬರಬಹುದು. ಪೋಷಕರು ಧೈರ್ಯವಾಗಿ ಮಕ್ಕಳನ್ನ ಶಾಲೆಗೆ ಕಳುಹಿಸಿ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.
ENGLISH SUMMARY….
Parents can send their children to school without fear: Minister Suresh Kumar
Bengaluru, Jan. 1, 2021 (www.justkannada.in): “Schools and colleges in the State have begun today. Parents need not panic. They can send their wards to schools without any fear,” opined Primary and Secondary Education Minister Suresh Kumar.
As schools are opened today, Minister Suresh Kumar visited a school in Bengaluru today and checked the precautionary measures that have been taken in that school.
Addressing press persons after his visit, he explained that “online classes are just an alternative. Children will learn, and their learning will be effective only if they come to schools. We are not pressurizing anyone to come to schools mandatorily. We have taken all necessary precautionary measures to prevent the spread of Coronavirus,” he explained.
Keywords: Minister Suresh Kumar/ Coronavirus/ Schools & Colleges begin
Key words: no anxiety – parents-children –school-Education Minister -Suresh Kumar.