ಬೆಂಗಳೂರು, 17, 01, 2021 (www.justkannada.in): ಚೀನಾದ ಬೀಜಿಂಕ್ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್ನಲ್ಲಿ ಸಾರ್ವಜನಿಕವಾಗಿ ಟಿಕೆಟ್ ಮಾರಾಟವನ್ನು ನಿಷೇಧಿಸಲಾಗಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಸಂಖ್ಯೆ ದಿನೇ ದಿನೇ ಏರುತ್ತಲೇ ಸಾಗಿದ್ದು, ನಿಯಮಗಳ ಅನ್ವಯ ಟಿಕೆಟ್ಗಳನ್ನ ಸಾರ್ವಜನಿಕವಾಗಿ ಮಾರಾಟ ಮಾಡುವುದನ್ನ ನಿಷೇಧಿಸಲಾಗಿದೆ.
ಸಾರ್ವಜನಿಕವಾಗಿ ಟಿಕೆಟ್ ಮಾರಾಟ ಮಾಡುವುದರ ಜೊತೆಗೆ ಯಾವುದೇ ವಿದೇಶಿ ಪ್ರೇಕ್ಷಕರು ಒಲಿಂಪಿಕ್ಸ್ ನೋಡಲು ಸಾಧ್ಯವಿಲ್ಲ.
ಈಗಾಗಲೇ ಕೋವಿಡ್-19 ಕಾರಣದಿಂದಾಗಿ ಚೀನಾ ತನ್ನ ಗಡಿಯನ್ನ ಬಂದ್ ಮಾಡಿದ್ದು ಅಂತರಾಷ್ಟ್ರೀಯ ಪ್ರಯಾಣಿಕರಿಗೆ ನಿಷೇಧ ಹೇರಿದೆ ಎಂದು ಸಂಘಟಕರು ಹೇಳಿದ್ದಾರೆ.
ಇನ್ನು ಈಗಾಗಲೇ ಆನ್ಲೈನ್ ಮೂಲಕ ಟಿಕೆಟ್ ಪಡೆದಿರುವ ದೇಶೀಯ ವೀಕ್ಷಕರು ಕಠಿಣ ಕೋವಿಡ್-19 ನಿಯಮಗಳನ್ನ ಪಾಲಿಸಬೇಕಾಗುತ್ತದೆ ಎಂದು ಒಲಿಂಪಿಕ್ಸ್ ಕಮಿಟಿ ತಿಳಿಸಿದೆ.