ಉತ್ತರ ಪ್ರದೇಶ, ಮಾರ್ಚ್ 7, 2020 (www.juskannada.in): ಹಿರಿಯ ನಟಿ ಹಾಗೂ ಬಿಜೆಪಿ ನಾಯಕಿ ಜಯಪ್ರದಾ ಅವರಿಗೆ ಉತ್ತರ ಪ್ರದೇಶ ನ್ಯಾಯಾಲಯ ಇಂದು ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.
ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ 57 ವರ್ಷದ ಜಯಪ್ರದಾ ಅವರು ಉತ್ತರ ಪ್ರದೇಶದ ರಾಮ್ಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಚುನಾವಣಾ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿತ್ತು.
ಇದೀಗ ವಾರೆಂಟ್ ಹೊರಡಿಸಿದ್ದು, ಮುಂದಿನ ಏಪ್ರಿಲ್ 20ರಂದು ವಿಚಾರಣೆ ನಡೆಯಲಿದೆ. ಚುನಾವಣೆಯಲ್ಲಿ ಜಯಪ್ರದಾ ಅವರು ಸಮಾಜವಾದಿ ಪಕ್ಷದ ಪ್ರತಿಸ್ಪರ್ಧಿ ಅಜಂ ಖಾನ್ ವಿರುದ್ಧ ಸುಮಾರು 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಹೀನಾಯ ಸೋಲನ್ನು ಅನುಭವಿಸಿದ್ದರು.