ನವದೆಹಲಿ, ಫೆಬ್ರವರಿ,5,2021(www.justkannada.in): ರೆಪೋ ದರ, ರಿಸರ್ವ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಇಂದು ಮಾಸಿಕ ವಿತ್ತೀಯ ನೀತಿ ಪ್ರಕಟಣೆ ಮಾಡಿದ್ದಾರೆ. ‘ಕೇಂದ್ರ ಬ್ಯಾಂಕ್ ಬೆಳವಣಿಗೆಗೆ ಪೂರಕ ಹಣಕಾಸು ನೀತಿ, ಹಣದುಬ್ಬರವನ್ನ ಗುರಿಮಟ್ಟದಲ್ಲಿ ಇರಿಸಿಕೊಳ್ಳಬೇಕು’ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಇಂದು ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್. ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ, ರಿಸರ್ವ್ ರೆಪೋ ದರದಲ್ಲೂ ಯಾವುದೇ ಬದಲಾವಣೆ ಇಲ್ಲ. ರೆಪೋ ದರ ಶೇ.4, ರಿಸರ್ವ್ ರೆಪೋ ದರ ಶೇ 3.35 ಮುಂದುವರೆಯಲಿದೆ. 2021-22ರಲ್ಲಿ ಜಿಡಿಪಿ ಸುಧಾರಿಸಲಿದೆ. ಶೇ.10.5 ರಷ್ಟು ಜಿಡಿಪಿ ಬೆಳವಣಿಗೆಯ ಗುರಿ ಇದೆ ಎಂದರು.
Key words: no change – repo rate- reserve repo rate-RBI Governor -Shaktikanth Das.