ಬೆಂಗಳೂರು,ಜು,10,2020(www.justkannada.in): ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಆನ್ ಲೈನ್ ಶಿಕ್ಷಣಕ್ಕೆ ಹೈಕೋರ್ಟ್ ಅಸ್ತು ಎಂದು ಸರ್ಕಾರದ ಆದೇಶಕ್ಕೆ ಈಗಾಗಲೇ ತಡೆ ನೀಡಿದೆ. ಈ ನಡುವೆ ಆನ್ ಲೈನ್ ಕ್ಲಾಸ್ ಗೆ ಬಲವಂತ ಮಾಡುವಂತಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ನಮ್ಮಲ್ಲಿ ಅನೇಕ ಕಡೆ ನೆಟ್ ವರ್ಕ್ ಸಮಸ್ಯೆ ಇದೆ. ಹೀಗಾಗಿ ಆನ್ ಲೈನ್ ಕ್ಲಾಸ್ ಗೆ ಬಲವಂತ ಮಾಡುವಂತಿಲ್ಲ. ಈ ಸಂಬಂಧ ಮುಂದಿನ ವಾರದಲ್ಲಿ ಸಭೆ ನಡೆಸುತ್ತೇನೆ. ತಜ್ಞರು ಪೋಷಕರ ಜತೆ ಚರ್ಚಿಸುತ್ತೇನೆ. ಅವರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಆನ್ಲೈನ್ ಶಿಕ್ಷಣ ಕುರಿತಂತೆ ರಾಜ್ಯ ಹೈಕೋರ್ಟ್ ಎರಡು ದಿನಗಳ ಹಿಂದೆ ತೀರ್ಪು ನೀಡಿತ್ತು. ಈ ಹಿಂದೆ ಆನ್ಲೈನ್ ಶಿಕ್ಷಣವನ್ನು ನಿರ್ಬಂಧಿಸಿ ರಾಜ್ಯ ಸರಕಾರ ನೀಡಿದ್ದ ಎರಡೂ ಆದೇಶಗಳಿಗೂ ತಡೆ ನೀಡಿ ಆನ್ ಲೈನ್ ಶಿಕ್ಷಣಕ್ಕೆ ಅಸ್ತು ಎಂದಿದೆ.
Key words: No compulsion – online class-Education Minister- Suresh Kumar