ಬೆಂಗಳೂರು,ಅಕ್ಟೋಬರ್,29,2021(www.justkannada.in): ಡ್ರಗ್ಸ್, ಬೀಟ್ ಕಾಯನ್ ಪ್ರಕರಣದಲ್ಲಿ ಪ್ರಭಾವಿಗಳಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪ ಮಾಡಿರುವ ಹಿನ್ನೆಲೆ ಇದಕ್ಕೆ ತಿರುಗೇಟು ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ ವಿಪಕ್ಷ ನಾಯಕರು ದಾಖಲೆ ಸಮೇತ ಆರೋಪ ಮಾಡಲಿ ಎಂದಿದ್ದಾರೆ.
ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ನಾಯಕರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಆರೋಪ ಮಾಡುವ ಮೊದಲು ಸೂಕ್ತ ದಾಖಲೆ ಇಟ್ಟುಕೊಳ್ಳಬೇಕಲ್ಲವೇ..? ಸುಮ್ಮನೆ ಆಧಾರ ರಹಿತ ಆರೋಪ ಮಾಡಬಾಡರು ಗುಸು ಗುಸು ಮಾತಿಗೆ ಆರೋಪ ಸರಿಯಲ್ಲ. ಇದು ಕಾಂಗ್ರೆಸ್ ನಾಯಕರಿಗೆ ತಿರುಗುಬಾಣವಾಗಲಿದೆ ಎಂದು ಟಾಂಗ್ ನೀಡಿದರು.
ಹಾಗೆಯೇ ಬಿಟ್ ಕಾಯಿನ್, ಡ್ರಗ್ಸ್ ಪ್ರಕರಣದಲ್ಲಿ ಯಾರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಬಿಟ್ ಕಾಯಿನ್ ತನಿಖೆ ವಿಚಾರದಲ್ಲಿ ಗೊಂದಲ ಇಲ್ಲ. ಡ್ರಗ್ಸ್ ವಿರುದ್ಧ ನಾನು ಸಮರ ಸಾರಿದ್ದೆ 2 ವರ್ಷಗಳಲ್ಲಿ ಅತಿಹೆಚ್ಚು ಡ್ರಗ್ಸ್ ಕೇಸ್ ದಾಖಲು ಮಾಡಲಾಗಿದೆ. ದಾಖಲೆ ಪ್ರಮಾಣದಲ್ಲಿ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ ಎಂದರು.
ಬಿಜೆಪಿ ಹಣ ಹಂಚಿತ್ತಿದ್ದಾರೆಂದು ಸುಮ್ಮನೆ ಆರೋಪ ಮಾಡುತ್ತಿದ್ದಾರೆ.ಎರಡು ಕ್ಷೇತ್ರಗಳಲ್ಲಿ ಬಿಜೆಪಿಗೆ ಜನರ ಅಪೂತಪೂರ್ವ ಬೆಂಬಲವಿದೆ. ಕಾಂಗ್ರೆಸ್ ನವರು ಸೋಲನ್ನ ತಪ್ಪಿಸಿಕೊಳ್ಳಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗರು ಸೋಲಿನ ನೆಪ ಹುಡುಕುತ್ತಿದ್ದಾರೆ ಎಂದು ಕಿಡಿಕಾರಿದರು.
Key words: no confusion- regarding-BitCoin- investigation-CM -Basavaraja Bommai.
ENGLISH SUMMARY…
No confusion over Bit Coin investigation: Let the opposition leaders make allegations with documents – CM Bommai
Bengaluru, October 29, 2021 (www.justkannada.in): Following allegations made by the leader of the opposition Siddaramaiah stating that there are powerful persons behind the drugs and Bitcoin cases, Chief Minister Basavaraj Bommai has asked him to prove it along with the relevant documents.
Speaking to the presspersons in Bengaluru today, the Chief Minister said, “the Congress leaders are making baseless charges. They should produce relevant documents when they make any allegations. Nobody should make baseless charges. It will boomerang to the Congress leaders.”
He also informed that there is no question of protecting anyone in the Bitcoin and Drugs case. “There is no confusion in the Bitcoin case. I had vowed a fight against drugs. Most cases have been registered in the last two years, and a huge amount of drugs have been seized,” he added.
Keywords: Chief Minister Basavaraj Bommai/ Siddaramaiah/ Bitcoin/ Drugs case