ಮೈಸೂರು,ಮಾ,18,2020(www.justkannada.in): ಕೊರೋನಾ ವೈರಸ್ ಹರಡದಂತೆ ಈಗಾಗಲೇ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮೈಸೂರಿನಲ್ಲಿ ಇಲ್ಲಿಯವರೆಗೂ ಯಾವುದೇ ಕೊರೋನಾ ಪ್ರಕರಣ ಪತ್ತೆಯಾಗಿಲ್ಲ ಎಂದು ಡಿಎಚ್ಓ ಡಾ. ವೆಂಕಟೇಶ್ ತಿಳಿಸಿದರು.
ಮೈಸೂರಿನಲ್ಲಿ ಕೊರೋನಾ ವೈರಸ್ ಕುರಿತು ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಮಾಹಿತಿ ನೀಡಿದ ಡಿಎಚ್ ಓ ಡಾ. ವೆಂಕಟೇಶ್, ಕೊರೋನಾ ಸೋಂಕು ಸಂಬಂಧ ಈಗಾಗಲೇ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವಿಶೇಷವಾಗಿ ವಿದೇಶಿ ಪ್ರವಾಸಿಗರ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ. ಶಂಕಿತ ವಿದೇಶಿ ಪ್ರವಾಸಿಗರನ್ನು ಕಡ್ಡಾಯವಾಗಿ 14 ದಿನಗಳ ಕಾಲ ಗೃಹಬಂಧನದಲ್ಲಿಟ್ಟು ಪ್ರತ್ಯೇಕವಾಗಿ ನಿಗಾವಹಿಸಲಾಗುತ್ತಿದೆ. ಈ ನಡುವೆ ಮೈಸೂರಿನಲ್ಲಿ ವೈರಸ್ ಪೀಡಿತ ಶಂಕಿತ ವಿದೇಶಿ ಪ್ರವಾಸಿಗರು ಕಂಡುಬಂದಿಲ್ಲ ಎಂದು ತಿಳಿಸಿದರು.
ಇನ್ನು ಸಾರ್ವಜನಿಕರಿಗೆ ಶಂಕಿತ ಪ್ರವಾಸಿಗರು ಕಂಡುಬಂದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಗೆ ದೂರವಾಣಿ ಮೂಲಕ ಮಾಹಿತಿ ನೀಡಿ ಎಂದು ಮನವಿ ಮಾಡಿದ ಡಿಎಚ್ ಓ ಡಾ. ವೆಂಕಟೇಶ್, ಮುಂಜಾಗ್ರತಾ ಕ್ರಮವಾಗಿ ಕರೋನಾ ಪ್ರಕರಣಗಳಿಗಾಗಿ ವಿಶೇಷ ಪ್ರತ್ಯೇಕ ಆ್ಯಂಬುಲೆನ್ಸ್ ಗಳನ್ನು ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
Key words: No corona- case – found- Mysore-DHO- Dr. Venkatesh -clarified.