ಬೆಂಗಳೂರು,ಜನವರಿ,21,2021(www.justkannada.in): ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೆ ಸಿಎಂ ಬಿಎಸ್ ಯಡಿಯೂರಪ್ಪ ಖಾತೆ ಹಂಚಿಕೆ ಮತ್ತು ಕೆಲ ಸಚಿವ ಖಾತೆ ಬದಲಾವಣೆ ಮಾಡಿದ್ದು ಈ ಹಿನ್ನೆಲೆಯಲ್ಲಿ ತಮ್ಮ ಖಾತೆ ಬದಲಾಯಿಸಿದ್ದಕ್ಕೆ ಸಚಿವ ಮಾಧುಸ್ವಾಮಿ ಬೇಸರಗೊಂಡಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಮಾಧುಸ್ವಾಮಿ, ಖಾತೆ ಬದಲಾವಣೆ ಮಾಡಿದ್ದಕ್ಕೆ ಬೇಸರ ಇದೆ. ರಾಜೀನಾಮೆಗೆ ನಿರ್ಧಾರ ಮಾಡಿಲ್ಲ. ನಾನು ಬೇರೆ ಖಾತೆ ಬಯಸಿದ್ದು ನಿಜ. ವೈದ್ಯಕೀಯ ಶಿಕ್ಷಣ ಕೂಡ ಒಳ್ಳೆಯ ಖಾತೆ. ಜನರ ಜೊತೆಗೆ ಕೆಲಸ ಮಾಡುವಂತ ಖಾತೆಯನ್ನು ನೀಡಿದ್ದರೇ ಖುಷಿ ಇರುತ್ತಿತ್ತು ಎಂದಿದ್ದಾರೆ.
ಜನರ ಜೊತೆಗೆ ಇರುವ ಖಾತೆ ಸಿಕ್ಕಿದ್ದರೆ ಖುಷಿ. ನನಗೂ ವೈದ್ಯಕೀಯ ಶಿಕ್ಷ ಖಾತೆಗೂ ಸಂಬಂಧವೇ ಇಲ್ಲ. ಖಾತೆ ಬದಲಾವಣೆ ಮಾಡಿದಕ್ಕೆ ಬೇಸರವಿದೆ. ಅದನ್ನು ಹೊರತಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತ ನಿರ್ಧಾರವನ್ನು ತಾವು ಮಾಡಿಲ್ಲ ಎಂದು ತಿಳಿಸಿದ್ದಾರೆ.
ಹಾಗೆಯೇ ಖಾತೆ ಬದಲಾವಣೆ ವೇಳೆ ಬೇಸರ ಸಹಜ. ಸಿಎಂ ಬಿಎಸ್ ವೈ ನನ್ನ ಜತೆ ಮಾತನಾಡಿದ್ದಾರೆ. ಸಿದ್ಧಗಂಗಾ ಶ್ರೀಗಳ ಕಾರ್ಯಕ್ರಮಕ್ಕೆ ನಾನು ಹೋಗಲ್ಲ. ಆರೋಗ್ಯ ಸಮಸ್ಯೆ ಹಿನ್ನೆಲೆ ಹೋಗಲ್ಲ. ಕ್ಯಾಬಿನೆಟ್ ಸಭೆಗೂ ಹೋಗಲು ಆಗೋದಿಲ್ಲ ಎಂದರು.
Key words: No decision – resign-Minister –JC Madhuswamy –upset-change -department