ಬೆಂಗಳೂರು,ಜು,8,2020(www.justkannada.in): ನನ್ನ ಕುಟುಂಬದಲ್ಲಿ ಮೂವರಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಆದರೆ ನಾನು ಹೆದರಲಿಲ್ಲ. ಕೊರೋನಾ ಗುಣಮುಖವಾಗದ ಕಾಯಿಲೆ ಅಲ್ಲ. ಹೀಗಾಗಿ ವೈದ್ಯರು ಹೆದರುವ ಅಗತ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಧೈರ್ಯ ಹೇಳಿದರು.
ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ನಮ್ಮ ಮನೆಯಲ್ಲಿ ಮೂವರಿಗೆ ಕೊರೋನಾ ಬಂದಿದ್ದರೂ ನಾನು ವೈದ್ಯನಾಗಿ ಹೆದರಲಿಲ್ಲ. ಕೊರೋನಾ ಗುಣವಾಗದ ಕಾಯಿಲೆ ಅಲ್ಲ. ಹೀಗಾಗಿ ವೈದ್ಯರು ಹೆದರದೇ ಡ್ಯೂಟಿ ಮಾಡಿ. ವೈದ್ಯರಿಗೆ ನಾನೇ ಬ್ರಾಂಡ್ ಅಂಬಾಸಿಡರ್. ಪ್ರತಿದಿನ ನಾನು ಕೋವಿಡ್ ಆಸ್ಪತ್ರೆಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆ ಮಾಲೀಕರು ಕೊಟ್ಟ ಮಾತಿನಂತೆ ಬೆಡ್ ಕೊಟ್ಟಿಲ್ಲ. ಮಾತುಕೊಟ್ಟಂತೆ ಬೆಡ್ ಕೊಡಲೇ ಬೇಕು. ಕಡ್ಡಾಯವಾಗಿ ಬೆಡ್ ಗಳನ್ನ ನೀಡಲೇಬೇಕು ಎಂದು ಸಚಿವ ಸುಧಾಕರ್ ಹೇಳಿದರು.
ದಿನೇ ದಿನೇ ಕೊರೋನಾ ಹೆಚ್ಚಳವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಸೋಂಕು ಹೆಚ್ಚಾಗುತ್ತದೆ ಅಂತಾ ಗೊತ್ತಿತ್ತು. ಆ ಪ್ರಮಾಣದಲ್ಲಿ ಹೆಚ್ಚಾಗಿದೆ. ನಾನು ಅಂದಾಜು ಮಾಡಿದ ಸಂಖ್ಯೆಗಿಂದ ಹೆಚ್ಚಾಗಿದೆ. ಜುಲೈ ಅಂತ್ಯಕ್ಕೆ ಬರಬೇಕಿದ್ದ ಪ್ರಕರಣ ಇಂದೇ ಬಂದಿದೆ. ಹೀಗಾಗಿ ಸರ್ಕಾರದಿಂದ ಅಗತ್ಯ ಕ್ರಮಗಳನ್ನ ಕೈಗೊಂಡಿದ್ದೇವೆ ಎಂದು ಸಚಿವ ಸುಧಾಕರ್ ತಿಳಿಸಿದರು.
Key words: no fear –Corona-Minister- Dr K Sudhakar – brand ambassador – doctors.