ಬೆಂಗಳೂರು,ಜುಲೈ,5,2021(www.justkannada.in): ಮೇಕೆದಾಟು ಯೋಜನೆಯಲ್ಲಿ ತಮಿಳುನಾಡಿಗೆ ಅನ್ಯಾಯ ಮಾಡುವ ಯೋಚನೆ ನಮಗೆ ಇಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ತಮಿಳುನಾಡು ಸಿಎಂ ಸ್ಟಾಲಿನ್ ಪತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸ್ಟಾಲಿನರ ಪತ್ರಿಕಾ ಹೇಳಿಕೆ ಗಮನಿಸಿದ್ದೇನೆ. ಸ್ಟಾಲಿನ್ ಅನುಮಾನ ಮೇಕೆದಾಟುವಿನಲ್ಲಿ ಸಂಗ್ರಹ ಮಾಡುವ ನೀರಿನ ಪ್ರಮಾಣ ಕಮ್ಮಿ ಆಗುತ್ತೆ ಅನ್ನೋದು. ಮೇಕೆದಾಟುವಿನಲ್ಲಿ ಜಲಾಶಯ ಕಟ್ಟಿದರೆ ನೀರಿನ ಪ್ರಮಾಣ ಕಮ್ಮಿಯಾಗಲ್ಲ. ತಮಿಳುನಾಡಿಗೆ ಪ್ರತಿ ವರ್ಷ ನೀರು ಕೊಡುವ ಹೊಣೆ ನಮ್ಮದು.
ನಾವು ತಮಿಳುನಾಡಿನವರು ಅಣ್ಣತಮ್ಮಂದಿರಂತೆ ಇರಬೇಕು. ಎರಡೂ ರಾಜ್ಯಗಳ ರೈತರು ಅಣ್ಣತಮ್ಮಂದಿರು. ಜಲಾಶಯ ನಿರ್ಮಾಣ ನಮ್ಮ ಜನರ ಬೇಡಿಕೆ. ಸಮುದ್ರಕ್ಕೆ ಹರಿದು ಹೋಗಿ ವ್ಯರ್ಥವಾಗುವ ನೀರನ್ನು ಸಂಗ್ರಹ ಮಾಡಲು ಜಲಾಶಯ ಕಟ್ತಿದೀವಿ ಅಷ್ಟೇ. ನಮ್ಮದು ನ್ಯಾಯಯುತ ಬೇಡಿಕೆ. ತಮಿಳುನಾಡಿಗೆ ಅನ್ಯಾಯ ಮಾಡುವ ಉದ್ದೇಶ ಇಲ್ಲ ನ್ಯಾಯಾಧೀಕರಣದ ಆದೇಶದಂತೆ 193 ಟಿಎಂಸಿ ಅಡಿ ನೀರು ಕೊಡ್ತೀವಿ, ಆದರೆ ಮೇಕೆದಾಟು ಯೋಜನೆ ನಿಲ್ಲಿಸಲು ಆಗಲ್ಲ. ಹೊಗೇನಕಲ್ ನಲ್ಲಿ ತಮಿಳುನಾಡು ಜಲಾಶಯ ಕಟ್ಟಿದೆಯಲ್ಲ ಯಾರಪ್ಪಣೆ ಪಡೆದಿದ್ರು? ಎಂದು ಹೆಚ್.ಡಿಕೆ ಪ್ರಶ್ನಿಸಿದರು.
ನಾವು ನ್ಯಾಯಾಧೀಕರಣದ ತೀರ್ಪು ಉಲ್ಲಂಘನೆ ಮಾಡಲ್ಲ. ಕನ್ನಡಿಗರು ಸಹೋದರರು ಅನ್ನೋ ಮನೋಭಾವ ಸ್ಟಾಲಿನ್ ಗೆ ಇರಲಿ ಎಂದು ಹೆಚ್.ಡಿಕೆ ಹೇಳಿದರು.
Key words: no intention -injustice – Tamil Nadu – Mekedatu scheme-Former CM-HD Kumaraswamy.