ಬೆಂಗಳೂರು,ಏಪ್ರಿಲ್,8,2023(www.justkannada.in): ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಕುರಿತು ಟೀಕಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮೋದಿ ಎಷ್ಟು ಬಾರಿ ಬೇಕಾದರೂ ರಾಜ್ಯಕ್ಕೆ ಬರಲಿ ನಮಗೆ ಬೇಸರವಿಲ್ಲ. ಬಿಜೆಪಿ 60ರಿಂದ 65 ಸ್ಥಾನವಷ್ಟೆ ಗೆಲ್ಲೋದು ಎಂದು ಭವಿಷ್ಯ ನುಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್, ಏನೋ ಮೇಕಪ್ ಮಾಡೋಕೆ ಮೋದಿ ಬರುತ್ತಿದ್ದಾರೆ. ಮೋದಿ ಎಷ್ಟು ಬಾರಿ ಬೇಕಾದರೂ ಬರಲಿ ನಮಗೆ ಬೇಸರವಿಲ್ಲ. ಬೇಕಾದ್ರೆ ಮೋದಿ ಕರ್ನಾಟಕದಲ್ಲೇ ಇರಲಿ ನಮಗೆ ಬೇಸರವಿಲ್ಲ ಬಿಜೆಪಿ ವೀಕ್ ಆಗಿದೆ ಅಂತಾ ಗೊತ್ತಾಗುತ್ತಿದೆ. ಈಗಾಗಿ ಬಿಜೆಪಿ ನಾಯಕರು ಸೋಲನ್ನ ಒಪ್ಪಿಕೊಂಡಿದ್ದಾರೆ. ಜನರು ಸೇರುವುದಿಲ್ಲ ಅಂತಾ ಚಿತ್ರನಟರನ್ನೂ ಕರೆಸುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ. ಸಮುದ್ರಕ್ಕೆ ನದಿ ಹೊಳೆ ಬಂದು ಸೇರುತ್ತವೆ ಬೇರೆ ಪಕ್ಷದಿಂದ ಎಷ್ಟು ಜನ ಬಂದಿಲ್ಲ. ಬಿಜೆಪಿ ನಮ್ಮ, ಪಕ್ಷದ ಅಭ್ಯರ್ಥಿಗಳನ್ನ ಟಾರ್ಗೆಟ್ ಮಾಡಿದೆ. ನಮ್ಮ ಅಭ್ಯರ್ಥಿಗಳ ಮೇಲೆ ಐಟಿ ಇಡಿ ದಾಳಿ ಮಾಡುತ್ತಿದೆ. ಕೆಲವು ಪೊಲೀಸರು ಬಿಜೆಪಿ ಏಜೆಂಟ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರನ್ನ ಬೆದರಿಸಿ ಕೇಸ್ ಹಾಕುತ್ತಿದ್ದಾರೆ ಅಂತಹ ಪೊಲೀಸ್ ಅಧಿಕಾರಿಗಳ ಪಟ್ಟಿ ತಯಾರಿಸಿದ್ದೇವೆ. ಮೇ 15ರ ಬಳಿಕ ನಿಮ್ಮ ರಾಶಿಗಳಿಗೆ ನಾವು ಇಳಿಯುತ್ತೇವೆ ಎಂದು ಹೇಳಿದರು.
ನಂದಿನಿ ನಮ್ಮದು. ರಾಜ್ಯದ ಸುಮಾರು 80 ಲಕ್ಷ ರೈತರು ಹಸುಗಳನ್ನ ಸಾಕುತ್ತಿದ್ದಾರೆ. ಕಡಿಮೆ ಬೆಲೆಗೆ ರೈತರು ಹಾಲನ್ನ ಮಾರಾಟ ಮಾಡುತ್ತಿದ್ದಾರೆ. ನಮ್ಮ ರೈತರಿಗೆ ಮೊದಲು ಬೆಲೆ ಕೊಡಬೇಕು. ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಕೈಯಲ್ಲಿ ಏನು ಇಲ್ಲ. ಈ ಬಿಜೆಪಿ ಸರ್ಕಾರವನ್ನ ಕಿತ್ತೊಗೆಯಬೇಕು ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
Key words: No matter – Modi –visit- state – DK Shivakumar